ಕೇಂದ್ರ ಮಾಜಿ ಸಚಿವ ದತ್ತಾತ್ರೇಯ ಪುತ್ರ ಹೃದಯಾಘಾತದಿಂದ ಸಾವು

7

ಕೇಂದ್ರ ಮಾಜಿ ಸಚಿವ ದತ್ತಾತ್ರೇಯ ಪುತ್ರ ಹೃದಯಾಘಾತದಿಂದ ಸಾವು

Published:
Updated:
ಕೇಂದ್ರ ಮಾಜಿ ಸಚಿವ ದತ್ತಾತ್ರೇಯ ಪುತ್ರ ಹೃದಯಾಘಾತದಿಂದ ಸಾವು

ಹೈದರಾಬಾದ್‌: ಕೇಂದ್ರದ ಮಾಜಿ ಸಚಿವ ಬಂಡಾರು ದತ್ತಾತ್ರೇಯ ಅವರ ಮಗ ವೈಷ್ಣವ್‌ (21) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಂಗಳವಾರ ರಾತ್ರಿ ಕುಟುಂಬದೊಂದಿಗೆ ಊಟ ಮಾಡುವಾಗ ಎದೆ ನೋವಿನಿಂದ ಕುಸಿದು ಬಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ರಾತ್ರಿ 1.30ಕ್ಕೆ ಮೃತಪಟ್ಟಿದ್ದಾರೆ. 

ಮೆಡಿಸಿಟಿ ಮೆಡಿಕಲ್‌ ಕಾಲೇಜಿನಲ್ಲಿ ವೈಷ್ಣವ್‌  ಮೂರನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದರು. ವೈಷ್ಣವ್‌ ಅವರು ತೂಕ ಕಡಿಮೆ ಮಾಡಿಕೊಳ್ಳಲು ಕಟ್ಟು ನಿಟ್ಟಿನ ಆಹಾರ ಸೇವನೆ ಮಾಡುತ್ತಿದ್ದರು. ಇದೇ ಹೃದಯಾಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry