ವರ್ತೂರು ಸೇತುವೆ ಪರಿಶೀಲನೆಗೆ ತಜ್ಞರ ಭೇಟಿ

7

ವರ್ತೂರು ಸೇತುವೆ ಪರಿಶೀಲನೆಗೆ ತಜ್ಞರ ಭೇಟಿ

Published:
Updated:

ಬೆಂಗಳೂರು: 17 ವರ್ಷ ಹಳೆಯದಾದ ವರ್ತೂರು ಸೇತುವೆಯನ್ನು ಬಿಬಿಎಂಪಿ ಎಂಜಿನಿಯರ್‌ಗಳು ಹಾಗೂ ತಜ್ಞರು ಪರಿಶೀಲಿಸಿದರು.

‘ವರ್ತೂರು ಕೆರೆ ಬಳಿ ಇರುವ ಸೇತುವೆಯ ಮೇಲೆ ಹೆಚ್ಚು ಭಾರವಾದ ವಾಹನಗಳು ಚಲಿಸಿದಾಗ ಅಲುಗಾಡುತ್ತಿರುವ ಬಗ್ಗೆ ದೂರು ಕೇಳಿ ಬಂದಿದೆ. ಪಿಡಬ್ಲ್ಯುಡಿ ಇಲಾಖೆಯವರು ಈ ಸೇತುವೆ ನಿರ್ಮಿಸಿದ್ದರು. ಈಗ ಅದು ನಮ್ಮ ಸುಪರ್ದಿಯಲ್ಲಿದೆ. ವಾಹನ ಸವಾರರು ಹೆದರುವ ಅಗತ್ಯ ಇಲ್ಲ’ ಎಂದು ಪಾಲಿಕೆ ಮುಖ್ಯ ಎಂಜಿನಿಯರ್‌ ಎಸ್‌.ಸೋಮಶೇಖರ್ ಹೇಳಿದ್ದಾರೆ.

‘ಕಂಬಗಳ ನಡುವೆ ಬಿರುಕು ಬಿಟ್ಟಿದೆ. ಸಣ್ಣ ರಿಪೇರಿ ಕೆಲಸ ಆಗಬೇಕಿದೆ. ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry