ಬ್ಯಾಗ್‌ ಕದ್ದು ಕ್ರೆಡಿಟ್‌ ಕಾರ್ಡ್‌ನಿಂದ ಹಣ ಡ್ರಾ

7

ಬ್ಯಾಗ್‌ ಕದ್ದು ಕ್ರೆಡಿಟ್‌ ಕಾರ್ಡ್‌ನಿಂದ ಹಣ ಡ್ರಾ

Published:
Updated:

ಬೆಂಗಳೂರು: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳ ಹ್ಯಾಂಡ್‌ಬ್ಯಾಗ್‌ ಕಳವು ಮಾಡಿದಕಳ್ಳರು ಅದರಲ್ಲಿದ್ದ ಕ್ರೆಡಿಟ್‌ ಕಾರ್ಡ್‌

ನಿಂದ ನಗದು ಡ್ರಾ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಐಡಿಯಲ್‌ ಟೌನ್‌ಶಿಪ್‌ ನಿವಾಸಿ ರಮಾ (57) ಅವರು ರಾಜರಾಜೇಶ್ವರಿ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ 18ರಂದು ರಾತ್ರಿ 7.40ಕ್ಕೆ ರಮಾ ಅವರು ರಾಜರಾಜೇಶ್ವರಿ ನಗರದ ಆರ್ಚ್‌ ಬಳಿ ಬಿ.ಎಂ.ಟಿ.ಸಿ ಬಸ್ ಹತ್ತಿ ಬೆಮೆಲ್‌ ಕಾಂಪ್ಲೆಕ್ಸ್‌ಗೆ ಹೋಗಿದ್ದಾರೆ.

ಮಾರ್ಗಮಧ್ಯೆ ಕಳ್ಳರು ಅವರ ಬ್ಯಾಗ್ ಕಳವು ಮಾಡಿದ್ದಾರೆ. ಅದೇ ದಿನ ರಾತ್ರಿ 8ರ ಸುಮಾರಿಗೆ ಕಳ್ಳರು ಬ್ಯಾಗ್‌ನಲ್ಲಿ ಕ್ರೆಡಿಟ್ ಕಾರ್ಡ್‌ ಬಳಸಿ ₹25 ಸಾವಿರ ನಗದು ಡ್ರಾ ಮಾಡಿಕೊಂಡಿದ್ದಾರೆ. ಆರೋಪಿಗಳನ್ನು ಪತ್ತೆ ಮಾಡಬೇಕು ಎಂದು ರಮಾ ದೂರಿನಲ್ಲಿ ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry