ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾ ಯಾರಿಸ್‌ ಮಾರುಕಟ್ಟೆಗೆ

Last Updated 23 ಮೇ 2018, 19:14 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ತಯಾರಿಕಾ ಸಂಸ್ಥೆ, ಟೊಯೊಟಾ ಕಿರ್ಲೋಸ್ಕರ್‌ ಮೋಟರ್‌, ಹೊಸ ಎಸ್‌ಯುವಿ ಸೆಡಾನ್‌–ಯಾರಿಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ವರ್ಷದ ಬಹು ನಿರೀಕ್ಷಿತ ವಾಹನಗಳಲ್ಲಿ ಒಂದಾಗಿರುವ ಯಾರಿಸ್‌, 11 ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜತೆಗೆ ಹಲವು ಸುರಕ್ಷತಾ ಕ್ರಮಗಳನ್ನು ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಕಿತೊ ತಾಚಿಬಾನಾ, ‘ಸುರಕ್ಷತೆ, ಗುಣಮಟ್ಟ, ದೀರ್ಘಬಾಳಿಕೆ ಮತ್ತು ವಿಶ್ವಾಸಾರ್ಹತೆ ಬಗ್ಗೆ  ಸಂಸ್ಥೆ ಹೆಚ್ಚು ಕಾಳಜಿ ವಹಿಸುತ್ತಿದೆ. ಹೀಗಾಗಿ ಗ್ರಾಹಕ ಸ್ನೇಹಿ ವಾಹನಗಳನ್ನು ಮಾರುಕಟ್ಟೆಗೆ ತರಲು ಶ್ರಮಿಸುತ್ತಿದೆ’ ಎಂದು ಹೇಳಿದರು.

‘ಈ ವಾಹನವನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಿಸಲಾಗಿದೆ. ಮುಖ್ಯವಾಗಿ ಸುರಕ್ಷತೆ ಕಡೆಗೆ ಹೆಚ್ಚು ಒತ್ತು ನೀಡಿದ್ದು, ಏಳು ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಸುಲಭವಾಗಿ ಪಾರ್ಕಿಂಗ್‌ ಮಾಡಲು ಮುಂಭಾಗ ಮತ್ತು ಹಿಂಭಾಗ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ’ ಎಂದರು.

ಸಂಸ್ಥೆಯ ಉಪ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಎನ್‌. ರಾಜ ಮಾತನಾಡಿ, ‘ದೇಶದಾದ್ಯಂತ ಯಾರಿಸ್‌ಗೆ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೇಡಿಕೆಯೂ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ವಾಹನವು ಜೆ, ಜಿ, ವಿ ಮತ್ತು ವಿಎಕ್ಸ್‌ ಮಾದರಿಗಳಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ ₹8,75,000ದಿಂದ ₹14,07,000ವರೆಗೆ ಇದೆ. ದೇಶದಾದ್ಯಂತ ಒಂದೇ ದರ ನಿಗದಿ ಪಡಿಸಲಾಗಿದೆ.

**

ವೈಶಿಷ್ಟ್ಯಗಳು

* 1.5 ಡ್ಯುಯಲ್ ವಿವಿಟಿ–ಐ ಗ್ಯಾಸೊಲಿನ್ ಎಂಜಿನ್

* ಎಲ್ಲ ಗಾಲಿಗಳಿಗೂ ಡಿಸ್ಕ್‌ ಬ್ರೇಕ್‌ಗಳು

* ಪವರ್ ಡ್ರೈವ್ ಸೀಟ್

* ಪಾರ್ಕಿಂಗ್ ಸೆನ್ಸರ್‌ಗಳು

* ಸ್ಮಾರ್ಟ್‌ಫೋನ್‌ ಜತೆಗೆ ಜೋಡಿಸಬಹುದಾದ ಟಚ್‌ ಸ್ಕ್ರೀನ್ ನ್ಯಾವಿಗೇಷನ್ ಆಡಿಯೊ ಸೌಲಭ್ಯ

* ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT