ಸಿದ್ದರಾಮಯ್ಯ ಲೋಕಾಭಿರಾಮ

7

ಸಿದ್ದರಾಮಯ್ಯ ಲೋಕಾಭಿರಾಮ

Published:
Updated:
ಸಿದ್ದರಾಮಯ್ಯ ಲೋಕಾಭಿರಾಮ

ಬೆಂಗಳೂರು: ಸರ್ಕಾರ ರಚನೆಯ ಜಂಜಡ ಹಾಗೂ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯತಂತ್ರ ಹೆಣೆಯುವಲ್ಲಿ ಎಂಟು ದಿನಗಳಿಂದ ಒತ್ತಡದಲ್ಲಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಸಂಜೆ ಲೋಕಾಭಿರಾಮವಾಗಿ ಕಾಲ ಕಳೆದರು.

ವಿಧಾನಸೌಧದ ಎದುರು ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಅವರು ನಿರಾಳರಾದರು.

ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಜನಾರ್ದನ ಹೋಟೆಲ್‌ಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು. ಅಲ್ಲದೇ ಅರ್ಧಗಂಟೆಗೂ ಹೆಚ್ಚು ಹೊತ್ತು, ಪಕ್ಷದ ಸಂಘಟನೆ ಕುರಿತು ಚರ್ಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry