ಸಿ.ಎಂ ಕುಮಾರಸ್ವಾಮಿ ಕುಟುಂಬ ಸದಸ್ಯರ ಸಡಗರ

7

ಸಿ.ಎಂ ಕುಮಾರಸ್ವಾಮಿ ಕುಟುಂಬ ಸದಸ್ಯರ ಸಡಗರ

Published:
Updated:
ಸಿ.ಎಂ ಕುಮಾರಸ್ವಾಮಿ ಕುಟುಂಬ ಸದಸ್ಯರ ಸಡಗರ

ಬೆಂಗಳೂರು: ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವ ಸಂಭ್ರಮಕ್ಕೆ ಅವರ ಇಡೀ ಕುಟುಂಬವೇ ಸಾತ್‌ ನೀಡಿತ್ತು.

ಅವರ ಸಹೋದರರಾದ ಶಾಸಕ ಎಚ್‌.ಡಿ.ರೇವಣ್ಣ, ಎಚ್‌.ಡಿ.ರಮೇಶ್‌, ಎಚ್‌.ಡಿ.ಬಾಲಕೃಷ್ಣೇ ಗೌಡ ಹಾಗೂ ಭಾವ ಡಾ.ಎನ್‌.ಮಂಜುನಾಥ್‌, ಡಾ.ಚಂದ್ರ

ಶೇಖರ್‌ ಸಪತ್ನೀಕರಾಗಿ ಭಾಗವಹಿಸಿದ್ದರು. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್‌ ಗೌಡ ಹಾಗೂ ರೇವಣ್ಣ ‍ಪುತ್ರ ಪ್ರಜ್ವಲ್‌ ರೇವಣ್ಣ  ಸಡಗರದಿಂದ ಅತ್ತಿಂದತ್ತ ಓಡಾಡುತ್ತಿದ್ದರು.

ದೇವರು–ಜನತೆ ಹೆಸರಲ್ಲಿ ಪ್ರಮಾಣ: ಕುಮಾರಸ್ವಾಮಿ ಅವರು ದೇವರು ಹಾಗೂ ಕನ್ನಡ ನಾಡಿನ ಜನತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಡಾ.ಜಿ.ಪರಮೇಶ್ವರ ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿದರು.

ಹಣ್ಣು ವಿತರಣೆ: ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಕೆ.ಆರ್.ಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಡಿ.ಎ.

ಗೋಪಾಲ್ ನೇತೃತ್ವದಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry