ದಾದಿ ಲಿನಿ ಮಕ್ಕಳಿಗೆ ₹20 ಲಕ್ಷ ಪರಿಹಾರ

7

ದಾದಿ ಲಿನಿ ಮಕ್ಕಳಿಗೆ ₹20 ಲಕ್ಷ ಪರಿಹಾರ

Published:
Updated:
ದಾದಿ ಲಿನಿ ಮಕ್ಕಳಿಗೆ ₹20 ಲಕ್ಷ ಪರಿಹಾರ

ತಿರುವನಂತಪುರ : ನಿಫಾ ಸೋಂಕಿತರಿಗೆ ಚಿಕಿತ್ಸೆ ನೀಡಿ, ಅವರಿಂದ ಸೋಂಕಿಗೆ ಒಳಗಾಗಿ ಮೃತಪಟ್ಟ ದಾದಿ ಲಿನಿ ಪುದುಶ್ಶೇರಿ ಅವರ ಕುಟುಂಬಕ್ಕೆ ಅಗತ್ಯ ನೆರವು ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ. ಲಿನಿ ಅವರ ಗಂಡ ಸಜೀಶ್‌ಗೆ ಅವರ ವಿದ್ಯಾರ್ಹತೆಗೆ ತಕ್ಕದಾದ ಉದ್ಯೋಗ ನೀಡಲಾಗುವುದು.

ಲಿನಿ ಅವರ ಐದು ಮತ್ತು ಎರಡು ವರ್ಷ ವಯಸ್ಸಿನ ಇಬ್ಬರು ಮಕ್ಕಳಿಗೆ ತಲಾ ₹10 ಲಕ್ಷ ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ.

ಈ ₹10 ಲಕ್ಷದ ಪೈಕಿ ₹5 ಲಕ್ಷವನ್ನು ಮಗುವಿನ ಹೆಸರಿನಲ್ಲಿ ಠೇವಣಿ ಇರಿಸಲಾಗುವುದು. ಉಳಿದ ₹5 ಲಕ್ಷವನ್ನೂ ಠೇವಣಿ ಇರಿಸಲಾಗುವುದು. ಆದರೆ ಈ ಠೇವಣಿಯ ಬಡ್ಡಿಯನ್ನು ಮಗುವಿನ ಅಗತ್ಯಕ್ಕೆ ಬಳಸಿಕೊಳ್ಳಲು ಅನುವಾಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಪೆರಂಬಾರ ತಾಲ್ಲೂಕು ಆಸ್ಪತ್ರೆಯಲ್ಲಿ ದಾದಿಯಾಗಿ ಲಿನಿ ಕೆಲಸ ಮಾಡುತ್ತಿದ್ದರು. ನಿಫಾ ಸೋಂಕಿತರಾಗಿದ್ದ ಮೂರು ರೋಗಿಗಳನ್ನು ಇಲ್ಲಿಗೆ ದಾಖಲಿಸಲಾಗಿತ್ತು. ಅವರನ್ನು ಲಿನಿ ನೋಡಿಕೊಂಡಿದ್ದರು.  ಸೋಂಕು ತಗಲಿದ ಬಳಿಕ ಆರಂಭದ ದಿನಗಳಲ್ಲಿ ಇದೇ ಆಸ್ಪತ್ರೆಯಲ್ಲಿ ಲಿನಿಗೆ ಚಿಕಿತ್ಸೆ ನೀಡಲಾಗಿತ್ತು. ತಮಗೆ ತಗುಲಿದ ಸೋಂಕು ಎಷ್ಟು ಗಂಭೀರ ಎಂಬುದು ಅವರಿಗೆ ಅರಿವಾಗಿತ್ತು. ಹಾಗಾಗಿ, ಬಹರೇನ್‌ನಲ್ಲಿದ್ದ ತಮ್ಮ ಪತಿ ಸಜೀಶ್‌ಗೆ ಅತ್ಯಂತ ಭಾವನಾತ್ಮಕ ಪತ್ರವನ್ನು ಅವರು ಬರೆದಿದ್ದರು.

‘ನನ್ನ ದಿನಗಳು ಮುಗಿದವು ಅನಿಸುತ್ತದೆ. ನಿಮ್ಮನ್ನು ಭೇಟಿಯಾಗಲು ನಾನು ಉಳಿಯುವ ಸಾಧ್ಯತೆ ಇಲ್ಲ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಅವರು ಬರೆದಿದ್ದರು.

ಲಿನಿ ಸಾವಿಗೆ ಎರಡು ದಿನ ಮೊದಲು ಸಜೀಶ್‌ ಅವರು ಬಹರೇನ್‌ನಿಂದ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry