ಉನೈ ಎಮೆರಿ ಆರ್ಸೆನಲ್‌ನ ನೂತನ್‌ ಕೋಚ್‌

7

ಉನೈ ಎಮೆರಿ ಆರ್ಸೆನಲ್‌ನ ನೂತನ್‌ ಕೋಚ್‌

Published:
Updated:
ಉನೈ ಎಮೆರಿ ಆರ್ಸೆನಲ್‌ನ ನೂತನ್‌ ಕೋಚ್‌

ಲಂಡನ್‌ (ಎಎಫ್‌ಪಿ): ಆರ್ಸೆನಲ್‌ ಫುಟ್‌ಬಾಲ್‌ ಕ್ಲಬ್‌ನ ನೂತನ ಕೋಚ್‌ ಆಗಿ ಉನೈ ಎಮೆರಿ ಅವರು ಆಯ್ಕೆಯಾಗಿದ್ದಾರೆ.

‘ನೂತನ ಕೋಚ್‌ ಆಯ್ಕೆಗೆ ಸಂಬಂಧಿಸಿದಂತೆ  ಆರ್ಸೆನಲ್‌ ಕ್ಲಬ್‌ನ ಎಲ್ಲ ಪದಾಧಿಕಾರಿಗಳು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಆರ್ಸೆನಲ್‌ ಕ್ಲಬ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇವಾನ್‌ ಗಜಿಡಿ ಹೇಳಿದ್ದಾರೆ.

‘ಹಲವು ತಂಡಗಳಿಗೆ ತರಬೇತಿ ನೀಡಿರುವ ಉನೈ ಅವರು ಕೋಚ್‌ ಆಗಿ ಉತ್ತಮ ದಾಖಲೆ ಹೊಂದಿದ್ದಾರೆ. ಅನೇಕ ಯುವ ಆಟಗಾರರು ಫುಟ್‌ಬಾಲ್‌ ರಂಗದಲ್ಲಿ ಬೆಳೆಯಲು ಅವರು ಕಾರಣರಾಗಿದ್ದಾರೆ’ ಎಂದು ಇವಾನ್‌ ತಿಳಿಸಿದ್ದಾರೆ.

‘ಫುಟ್‌ಬಾಲ್‌ ಜಗತ್ತಿನ ಶ್ರೇಷ್ಠ ಕ್ಲಬ್‌ಗಳಲ್ಲಿ ಒಂದಾದ ಆರ್ಸೆನಲ್‌ ಕುಟುಂಬಕ್ಕೆ ಸೇರ್ಪಡೆಯಾಗಲು ಸಂತಸವಾಗುತ್ತಿದೆ. ಆರ್ಸೆನಲ್‌ ಫುಟ್‌ಬಾಲ್‌ ತಂಡದ ಹೊಸ ಅಧ್ಯಾಯವೊಂದನ್ನು ಆರಂಭಿಸುವ ಜವಾಬ್ದಾರಿ ನನಗೆ ದೊರೆತಿದೆ. ಜಗತ್ತಿನ ಪ್ರಮುಖ ಆಟಗಾರರನ್ನು ಹೊಂದಿರುವ ಈ ತಂಡವನ್ನು ಮುನ್ನಡೆಸಲು ಕಾತರನಾಗಿದ್ದೇನೆ’ ಎಂದು ಎಮೆರಿ ಹೇಳಿದ್ದಾರೆ.

ಆರ್ಸೆನಲ್‌ನ ಕೋಚ್‌ ಆಗಿದ್ದ ಅರ್ಸೆನ್‌ ವೆಂಗರ್‌ ಅವರು ಈ ಋತುವಿನ ಕೊನೆಯಲ್ಲಿ ನಿವೃತ್ತಿಯಾಗಿದ್ದರು.

ಅವರು 22 ವರ್ಷಗಳ ಕಾಲ ಆರ್ಸೆನಲ್‌ನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.

ಇತ್ತೀಚೆಗಷ್ಟೇ ಉನೈ ಅವರು ಪ್ಯಾರಿಸ್‌ ಸೆಂಟ್‌ ಜರ್ಮೈನ್‌ (ಪಿಎಸ್‌ಜಿ) ಫುಟ್‌ಬಾಲ್‌ ತಂಡದ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಉನೈ ಅವರು ಕೆಲಕಾಲ ಸ್ಪೇನ್‌ನ ವಲೆನಿಕಾ ಎಫ್‌ಸಿ ಕ್ಲಬ್‌ನ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry