ಚಿನ್ನಪ್ಪ ಗಾರ್ಡನ್‌ ತಂಡಕ್ಕೆ ಜಯ

7

ಚಿನ್ನಪ್ಪ ಗಾರ್ಡನ್‌ ತಂಡಕ್ಕೆ ಜಯ

Published:
Updated:

ಬೆಂಗಳೂರು: ಚಿನ್ನಪ್ಪ ಗಾರ್ಡನ್‌ ಎಫ್‌ಸಿ ತಂಡವು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ‘ಸಿ’ ಡಿವಿಷನ್‌ ಫುಟ್‌ಬಾಲ್‌ ಲೀಗ್‌ ಪಂದ್ಯದಲ್ಲಿ ಟೌನ್‌ ಎಸ್‌ಸಿ ಹೊಸಕೋಟೆ ತಂಡದ ವಿರುದ್ಧ ಜಯಿಸಿದೆ.

ಬೆಂಗಳೂರು ಫುಟ್‌ಬಾಲ್‌ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚಿನ್ನಪ್ಪ ಗಾರ್ಡನ್‌ ತಂಡವು 4–0 ಗೋಲುಗಳಿಂದ ಟೌನ್‌ ಎಸ್‌ಸಿ ಹೊಸಕೋಟೆ ತಂಡವನ್ನು ಮಣಿಸಿತು.

ವಿಜಯೀ ತಂಡದ ಪರವಾಗಿ ಕಿಶೋರ್‌, ಗಂಗಾಧರ್‌, ಗೋವಿಂದ ಹಾಗೂ ಮೊನೀಶ್‌ ಅವರು ತಲಾ ಒಂದು ಗೋಲು ಗಳಿಸಿದರು.

ಇಂಡಿಯನ್‌ ನೈಟ್ಸ್‌ ಎಫ್‌ಸಿ ತಂಡವು ಪಂದ್ಯದಿಂದ ಹಿಂದೆ ಸರಿದ ಕಾರಣ ರೆಬೆಲ್ಸ್‌ ಎಫ್‌ಸಿ ತಂಡಕ್ಕೆ ವಾಕ್‌ಓವರ್‌ ನೀಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry