ಟಾಪ್‌: ಸಾನಿಯಾ ಹೆಸರಿಲ್ಲ

7

ಟಾಪ್‌: ಸಾನಿಯಾ ಹೆಸರಿಲ್ಲ

Published:
Updated:
ಟಾಪ್‌: ಸಾನಿಯಾ ಹೆಸರಿಲ್ಲ

ನವದೆಹಲಿ: ಟೆನಿಸ್ ತಾರೆ ಸಾನಿಯಾ ಮಿರ್ಜಾ ಸೇರಿದಂತೆ ಎಂಟು ಆಟಗಾರರ ಹೆಸರನ್ನು ಕೇಂದ್ರ ಸರ್ಕಾರದ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ (ಟಾಪ್‌) ಯೋಜನೆಯಿಂದ ತೆಗೆದುಹಾಕಲಾಗಿದೆ.

ಹೊಸ ಪಟ್ಟಿಯನ್ನು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಬುಧವಾರ ಪ್ರಕಟಿಸಲಾಗಿದೆ. ಸಾನಿಯಾ ಅವರು ಗರ್ಭಿಣಿ ಆಗಿರುವ ಕಾರಣ ಅವರ ಹೆಸರನ್ನು ಕೈಬಿಡಲಾಗಿದೆ ಎನ್ನಲಾಗಿದೆ.

ಅಥ್ಲೀಟ್‌ಗಳಾದ ಎ.ಧಾರುಣ್ ಮತ್ತು ಮೋಹನ್ ಕುಮಾರ್ ಅವರ ಹೆಸರನ್ನು ಸೇರಿಸಲಾಗಿದ್ದು ಕುಸ್ತಿ ಪಟುಗಳಾದ ಪ್ರವೀಣ್ ರಾಣಾ, ಸತ್ಯಾವರ್ಥ್ ಕಾಡಿಯನ್‌, ಸುಮಿತ್‌, ಲಲಿತಾ ಮತ್ತು ಸರಿತಾ, ಬಾಕ್ಸರ್‌ಗಳಾದ ಎಲ್‌.ದೇವೇಂದ್ರೊ ಸಿಂಗ್‌ ಮತ್ತು ಸರ್ಜುಬಾಲ ದೇವಿ ಅವರ ಹೆಸರನ್ನು ತೆಗೆದು ಹಾಕಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry