4

ಫಿಟ್‌ನೆಸ್‌ ಸವಾಲೆಸೆದ ಕೊಹ್ಲಿ

Published:
Updated:
ಫಿಟ್‌ನೆಸ್‌ ಸವಾಲೆಸೆದ ಕೊಹ್ಲಿ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಫಿಟ್‌ನೆಸ್‌ಗೆ ಸಂಬಂಧಿಸಿದಂತೆ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಅವರಿಗೆ ಬುಧವಾರ ಟ್ವಿಟರ್‌ನಲ್ಲಿ ಸವಾಲೆಸೆದಿದ್ದಾರೆ.

ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರು ‘ಹಮ್‌ ಫಿಟ್‌ ತೋ ಇಂಡಿಯಾ ಫಿಟ್‌’ ಎಂಬ ಅಭಿಯಾನದ ಅಡಿಯಲ್ಲಿ ಎಲ್ಲ ಭಾರತೀಯರು ತಮ್ಮ ಫಿಟ್‌ನೆಸ್‌ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳಲು ಟ್ವಿಟರ್‌ನಲ್ಲಿ ಕರೆ ನೀಡಿದ್ದರು.

ಆ ಟ್ವೀಟ್‌ನೊಂದಿಗೆ ಅವರು 10 ಸಲ ಪುಷ್‌ ಅಪ್‌ ಮಾಡಿದ ವಿಡಿಯೊವನ್ನು ಹಂಚಿಕೊಂಡಿದ್ದರು. ನಂತರ ವಿರಾಟ್‌ ಕೊಹ್ಲಿ, ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಹಾಗೂ ಬಾಲಿವುಡ್‌ ನಟ ಹೃತಿಕ್‌ ರೋಶನ್‌ ಅವರಿಗೆ ಈ ಫಿಟ್‌ನೆಸ್‌ ಸವಾಲನ್ನು ಮುಂದುವರಿಸಿಕೊಂಡು ಹೋಗುವಂತೆ ಸವಾಲೆಸೆದಿದ್ದರು.

ಈ ಸವಾಲನ್ನು ಸ್ವೀಕರಿಸಿದ ವಿರಾಟ್‌ ಕೊಹ್ಲಿ ಅವರು ತಾವು ಬಟ್‌ ಪ್ಲ್ಯಾಂಕ್‌ ವ್ಯಾಯಾಮ ಮಾಡಿದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ಅನುಷ್ಕಾ ಶರ್ಮಾ,  ಪ್ರಧಾನಿ ನರೇಂದ್ರ ಮೋದಿ, ಹಾಗೂ ದೋನಿ ಅವರನ್ನು ಟ್ಯಾಗ್‌ ಮಾಡಿದ್ದಾರೆ. ಈ ಫಿಟ್‌ನೆಸ್‌ ಸವಾಲನ್ನು ಸ್ವೀಕರಿಸುವಂತೆ ಅವರಿಗೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry