ನಾಳೆ ತಮಿಳುನಾಡು ಬಂದ್

7

ನಾಳೆ ತಮಿಳುನಾಡು ಬಂದ್

Published:
Updated:

ಚೆನ್ನೈ: ತಮಿಳುನಾಡಿನ ತೂತ್ತುಕುಡಿಯಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ ಖಂಡಿಸಿ ಡಿಎಂಕೆ ಇದೇ ತಿಂಗಳ 25ರಂದು ತಮಿಳುನಾಡು ಬಂದ್‌ಗೆ ಕರೆ ನೀಡಿದೆ.

ರಾಜ್ಯದ ವಿರೋಧ ಪಕ್ಷಗಳು ಸೇರಿದಂತೆ ಎಲ್ಲ ಪ್ರಾದೇಶಿಕ ಪಕ್ಷಗಳು ಜಿಲ್ಲೆಗಳ ಪ್ರಮುಖ ಕೇಂದ್ರಗಳಲ್ಲಿ ಪೊಲೀಸರ ಶೋಷಣೆ ವಿರುದ್ಧ ಪ್ರತಿಭಟನೆ ಕೈಗೊಳ್ಳುವಂತೆ ನಿರ್ದೇಶನ ನೀಡಿದ ಡಿಎಂಕೆ, ಈ ಬಂದ್ ತಮಿಳಿಗರ ಮನೋಭಾವದ ಮೇಲೆ ಬೆಳಕು ಚೆಲ್ಲಲಿದೆ ಎಂದು ಹೇಳಿದೆ.

ಬುಧವಾರ ತಡರಾತ್ರಿ ಎಲ್ಲ ಪಕ್ಷಗಳಿಗೆ ನಿರ್ದೇಶನ ಹೊರಡಿಸಿದ ಡಿಎಂಕೆ, ಪ್ರತಿಭಟನೆ ವೇಳೆ ಸ್ಟೆರ್‌ಲೈಟ್ ಕಂಪೆನಿಯನ್ನು ಮುಚ್ಚುವಂತೆ ಒತ್ತಡ ಹೇರಬೇಕು ಹಾಗೂ ಅಮಾಯಕರ ಮೇಲೆ ಪೊಲೀಸರು ನಡೆಸಿದ ದಬ್ಬಾಳಿಕೆಯನ್ನು ಖಂಡಿಸಬೇಕು ಎಂದಿದೆ.

ಪ್ರತಿಭಟನೆಯಲ್ಲಿ ಡಿಎಂಕೆ, ಆಲ್ ಇಂಡಿಯಾ ಕಾಂಗ್ರೆಸ್, ದ್ರಾವಿಡರ್ ಕಜಾಗಮ್, ಮರುಮಲಾರ್ಚಿ ದ್ರಾವಿಡ ಮುನ್ನೇತ್ರಾ ಕಜಾಗಮ್, ಚಿಪಿಐ, ಸಿಪಿಐ(ಎಮ್), ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್, ವಿಧುತಲೈ ಚಿರುಥೈಗಲ್ ಕಟ್ಚಿ ಮತ್ತು ಮಣಿಥನೆಯಾ ಮಕ್ಕಲ್ ಕಟ್ಚಿ ಪಕ್ಷಗಳು ಪ್ರತಿಭಟನೆ ಕೈಗೊಳ್ಳಲಿವೆ.

ಇವನ್ನೂ ಓದಿ...

ಗೋಲಿಬಾರ್‌ಗೆ 11 ಬಲಿ

ಗೋಲಿಬಾರ್‌: ವರದಿ ಕೇಳಿದ ಕೇಂದ್ರ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry