ರಾಮನಗರದಲ್ಲಿ ಮಳೆ, ಬಿರುಗಾಳಿ: ಧರೆಗೆ ಉರುಳಿದ ಮರಗಳು

7

ರಾಮನಗರದಲ್ಲಿ ಮಳೆ, ಬಿರುಗಾಳಿ: ಧರೆಗೆ ಉರುಳಿದ ಮರಗಳು

Published:
Updated:
ರಾಮನಗರದಲ್ಲಿ ಮಳೆ, ಬಿರುಗಾಳಿ: ಧರೆಗೆ ಉರುಳಿದ ಮರಗಳು

ರಾಮನಗರ: ಬುಧವಾರ ರಾತ್ರಿ ಮಳೆ ಹಾಗೂ ಬಿರುಗಾಳಿಯಿಂದಾಗಿ ತಾಲ್ಲೂಕಿನ ಬಿಡದಿ ಹೋಬಳಿಯ ಎಂ.ಕರೇನಹಳ್ಳಿ ಹಾಗೂ ಸುತ್ತಮುತ್ತ ಹತ್ತಾರು ಮರಗಳು ಧರೆಗೆ ಉರುಳಿವೆ.

ವೆಂಕಟಮೂರ್ತಿ ಎಂಬುವರಿಗೆ ಸೇರಿದ ತೋಟದಲ್ಲಿನ  ಹತ್ತಕ್ಕೂ ಹೆಚ್ಚು ತೆಂಗಿನ ಮರ, ನಲವತ್ತಕ್ಕೂ ಹೆಚ್ಚು ಅಡಕೆ ಮರಗಳು ನೆಲಕ್ಕೆ ಬಿದ್ದಿವೆ. ಇತರ ರೈತರ ತೋಟಗಳಲ್ಲಿನ‌ ಸಾಕಷ್ಟು ಮರಗಳೂ ಉರುಳಿವೆ.

ರಾಮನಗರ ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಸರಾಸರಿ 15 ಮಿ.ಮೀ. ಮಳೆಯಾಗಿದೆ‌. ಬಿಡದಿ‌ ಭಾಗದಲ್ಲಿ 44 ಮಿ.ಮೀ ಮಳೆ ಸುರಿದಿದೆ. ಚನ್ನಪಟ್ಟಣ ದಲ್ಲಿ 11 ಮಿ.ಮೀ ಹಾಗೂ ಮಾಗಡಿ ತಾಲ್ಲೂಕಿನಲ್ಲಿ 17 ಮಿ.ಮೀ. ಸರಾಸರಿ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry