ನಿಫಾ ವೈರಾಣು ಸೋಂಕು; ಸಾವಿನ ಸಂಖ್ಯೆ 12ಕ್ಕೆ ಏರಿಕೆ

7

ನಿಫಾ ವೈರಾಣು ಸೋಂಕು; ಸಾವಿನ ಸಂಖ್ಯೆ 12ಕ್ಕೆ ಏರಿಕೆ

Published:
Updated:
ನಿಫಾ ವೈರಾಣು ಸೋಂಕು; ಸಾವಿನ ಸಂಖ್ಯೆ 12ಕ್ಕೆ ಏರಿಕೆ

ಕೋಯಿಕ್ಕೋಡ್: ಕೇರಳ ರಾಜ್ಯದಲ್ಲಿ ನಿಫಾ ವೈರಾಣು ಸೋಂಕಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಸಾವಿನ ಸಂಖ್ಯೆ 12ಕ್ಕೆ ಏರಿದೆ.

ಕೋಯಿಕ್ಕೋಡ್ ನಿವಾಸಿ ಮೃತ ವಲಚೆಕುಟ್ಟಿ ಮೂಸ (62) ಅವರು ಕಳೆದ ಮೂರು ವಾರಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಇವರಿಗೆ ನಿಫಾ ಸೋಂಕು ತಗುಲಿರುವುದು ಸೋಮವಾರ ಪತ್ತೆಯಾಗಿತ್ತು.

ಮೃತ ವಲಚೆಕುಟ್ಟಿ ಮೂಸ ಅವರು ತಮ್ಮ ಮಕ್ಕಳಾದ ಮೊಹಮ್ಮದ್ ಸಾಲಿಯಾ, ಮೊಹಮ್ಮದ್ ಸಾದಿಕ್, ಸಹೋದರನ ಪತ್ನಿ ಮೇರಿಉಮ್ಮಾ ಅವರು ಕೂಡ ನಿಫಾ ಸೋಂಕಿನಿಂದಾಗಿ ಮೃತಪಟ್ಟಿದ್ದರು. ಈ ಮೂಲಕ ಒಂದೇ ಕುಟುಂಬದ ನಾಲ್ವರು ಸಾವಿಗೀಡಾದಂತಾಗಿದೆ. 

ಮಲ್ಲಾಪುರಂ ಜಿಲ್ಲೆಯಲ್ಲಿ ಎರಡಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ. 7 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry