ರಾಗಿಣಿಗೆ ಟೆಡ್ಡಿ ಬೇರ್‌ ಉಡುಗೊರೆ

7

ರಾಗಿಣಿಗೆ ಟೆಡ್ಡಿ ಬೇರ್‌ ಉಡುಗೊರೆ

Published:
Updated:
ರಾಗಿಣಿಗೆ ಟೆಡ್ಡಿ ಬೇರ್‌ ಉಡುಗೊರೆ

ಬೆಂಗಳೂರು:  ಬುಧವಾರ ಸಂಜೆ 7.30ರ ಸುಮಾರಿಗೆ ‘ಬೆಂಗಳೂರಿನ ಎಂ.ಜಿ. ರಸ್ತೆ ಬಳಿಯ ಕ್ಲಬ್‌ಗೆ ಬರಬೇಕು’ ಎಂದು ನಟಿ ರಾಗಿಣಿ ದ್ವಿವೇದಿ ಸಂದೇಶ ರವಾನಿಸಿದ್ದರು. ಆ ಸಂದೇಶಕ್ಕೆ ‘ಹ್ಞೂಂ’ ಎಂದವರೆಲ್ಲ ಆ ಕ್ಲಬ್‌ ಬಳಿ ಇದ್ದರು. ಎಂಟು ಗಂಟೆಯ ಸುಮಾರಿಗೆ ರಾಗಿಣಿ ದ್ವಿವೇದಿ ಮಿರಿ ಮಿರಿ ಮಿಂಚುವ ಶಾರ್ಕ್‌ ಸೂಟ್‌ ಧರಿಸಿ, ಪಾರ್ಟಿ ಹಾಲ್‌ಗೆ ಬಂದರು. ಅಂದಹಾಗೆ, ಇವನ್ನೆಲ್ಲ ಆಯೋಜಿಸಿದ್ದು ರಾಗಿಣಿ ಅವರ 28ನೇ ಜನ್ಮದಿನ ಆಚರಿಸುವುದಕ್ಕಾಗಿ.

ರಾಗಿಣಿ ಅವರ ಹುಟ್ಟುಹಬ್ಬಕ್ಕಾಗಿ ಅವರ ಸಹೋದರ ಐದು ಅಡಿ ಎತ್ತರದ ಟೆಡ್ಡಿ ಬೇರ್‌ ಗೊಂಬೆಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದನ್ನು ರಾಗಿಣಿ ಪಾರ್ಟಿಗೆ ಬಂದಿದ್ದವರಿಗೆಲ್ಲಾ ಖುಷಿಯಿಂದ ತೋರಿಸುತ್ತಿದ್ದರು. ‘28 ವರ್ಷ ಆಯಿತು, ಮದುವೆ ಸುದ್ದಿ’ ಎಂದು ಕೆಲವರು ಪ್ರಶ್ನಿಸಿದಾಗ, ನಕ್ಕು, ಪ್ರಶ್ನೆಯನ್ನೇ ದೂರ ತೇಲಿಸಿಬಿಟ್ಟರು ರಾಗಿಣಿ!

ಈ ಹುಟ್ಟುಹಬ್ಬಕ್ಕೆ ಅವರು ಒಂದು ನಿರ್ಣಯ ಕೈಗೊಂಡಿದ್ದಾರೆ. ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿ, ಅಭಿಮಾನಿಗಳ ಮನರಂಜಿಸುವುದು ಆ ನಿರ್ಣಯ. ಅಂದಹಾಗೆ, ರಾಗಿಣಿ ಅವರು ಹುಟ್ಟಿದ ಹಬ್ಬದ ದಿನ ‘ರೆಸೊಲ್ಯೂಷನ್’ ಕೈಗೊಳ್ಳುವ ವ್ಯಕ್ತಿ ಅಲ್ಲವಂತೆ. ‘ರೆಸೊಲ್ಯೂಷನ್ ಕೈಗೊಳ್ಳುವುದು ಅಂದರೆ, ಒಂದು ದಿನ ಅದನ್ನು ಮುರಿಯುವುದು ಅಂತಲೇ ಅರ್ಥ. ಹಾಗಾಗಿ ನಾನು ಯಾವುದೇ ರೆಸೊಲ್ಯೂಷನ್‌ ಕೈಗೊಳ್ಳುವುದಿಲ್ಲ’ ಎಂದರು ರಾಗಿಣಿ.

ಆದರೂ ಪಾರ್ಟಿಯಲ್ಲಿ ಸೇರಿದ್ದವರು ಒತ್ತಾಯಿಸಿದಾಗ, ‘ಒಳ್ಳೆಯ ಸಿನಿಮಾ ಮಾಡಿ, ಅಭಿಮಾನಿಗಳ ಮನಸ್ಸನ್ನು ರಂಜಿಸುವುದೇ ರೆಸೊಲ್ಯೂಷನ್’ ಎಂದರು. ರಾಗಿಣಿ ಅವರು ಪಾರ್ಟಿಗೆ ತೀರಾ ದೊಡ್ಡ ಸಂಖ್ಯೆಯಲ್ಲಿ ಆಹ್ವಾನ ನೀಡಿರಲಿಲ್ಲ. ಅವರ ಕುಟುಂಬದ ಸದಸ್ಯರು, ತೀರಾ ಹತ್ತಿರದವರು ಮಾತ್ರ ‍ಪಾರ್ಟಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry