ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಜ್ಜೆ ಹೆಜ್ಜೆಗೂ ಸವಾಲು; ಮುಖ್ಯಮಂತ್ರಿ ಕುಮಾರಸ್ವಾಮಿ

Last Updated 24 ಮೇ 2018, 9:43 IST
ಅಕ್ಷರ ಗಾತ್ರ

ತುಮಕೂರು: 5 ವರ್ಷ ಸರ್ಕಾರ ನಡೆಸಬೇಕು ಎನ್ನುವುದು ನನ್ನ ಆಸೆ. ಹೆಜ್ಜೆ ಹೆಜ್ಜೆಗೂ ಸವಾಲು ಹಾಗೂ ಕಿರುಕುಳ ಇದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸಿದ್ದಗಂಗಾ ಶ್ರೀಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೂರ್ಣ ಬಹುಮತ ಬಾರದ ಪ್ರಯುಕ್ತ ಮೈತ್ರಿ ಸರ್ಕಾರ ರಚಿಸಲಾಗಿದೆ. ಆದರೆ, ನಾಳೆ ಬಹುಮತ ಸಾಬೀತು ಪಡಿಸುವರೆರೆಗೆ ತಾಳ್ಮೆಯಿಂದ ಕಾಯಿರಿ. ಪ್ರತಿ ಪಕ್ಷಕ್ಕೆ ಸದನದಲ್ಲಿ ಉತ್ತರ ಕೊಡುವೆ. ಮಾಧ್ಯಮಗಳ ಮುಂದೆಯೂ ನನ್ನ ಭಾವನೆ ಹಂಚಿಕೊಳ್ಳುವೆ’ ಎಂದರು.

‘ಹಿಂದಿನ ಸರ್ಕಾರದ ಭ್ರಷ್ಟಚಾರ, ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ, ಪ್ರಚಾರ ಭಾಷಣಗಳಲ್ಲಿ ಹೇಳಿಲ್ಲ. ಕೇವಲ ಅಭಿವೃದ್ಧಿ ಮತ್ತು ರೈತರ ಏಳಿಗೆ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ’ ಎಂದರು.

ಎತ್ತಿನ ಹೊಳೆ ಯೋಜನೆ ಕಾಮಗಾರಿ, ಭದ್ರಾ ಯೋಜನೆ ಕಾಮಗಾರಿ ಹೀಗೆ ಯಾವುದೇ ನೀರಾವರಿ ಯೊಜನೆ ಇರಲಿ. ಅಕ್ರಮಗಳು ನಡೆಯಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರಬಹುದು. ನಾಳೆ ವಿಶ್ವಾಸ ಮತ ಸಾಬೀತಿನ ಬಳಿಕ ಸರ್ಕಾರದ ನಿಲುವುಗಳ ಬಗ್ಗೆ ಅಧಿಕೃತವಾಗಿ ಹೇಳಲು ಸಾಧ್ಯ. ಅಲ್ಲಿಯವರೆಗೆ ಮಾಧ್ಯಮದವರು ಕಾಯಬೇಕು ಎಂದರು.

ಮಕ್ಕಳ ಕಳ್ಳ ಎಂದು ಬೆಂಗಳೂರಿನಲ್ಲಿ ಅಮಾಯಕನ ಮೇಲೆ ಹಲ್ಲೆ ಮಾಡಿರುವುದು, ಆತ ಮೃತಪಟ್ಟಿರುವ ವಿಚಾರ ಗೊತ್ತಿದೆ. ಈ ಕುರಿತು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮುಖಂಡರಾದ ಬಸವರಾಜ ಹೊರಟ್ಟಿ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT