ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ ಲವ್ಸ್ ರಾಧೆ

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ರಾಜ ಲವ್ಸ್ ರಾಧೆ
ಎಚ್. ಎಲ್. ಎನ್. ರಾಜು ನಿರ್ಮಾಣದ ‘ರಾಜ ಲವ್ಸ್ ರಾಧೆ’ ಚಿತ್ರಕ್ಕೆ ರಾಜಶೇಖರ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರಕ್ಕೆ ವಿ. ಸಮರ್ಥ್ ಸಂಗೀತ, ಚಿದಾನಂದ್ ಛಾಯಾಗ್ರಹಣ, ವಿಜಯ ಬರಮಸಾಗರ ಸಂಭಾಷಣೆ ಇದೆ. ವಿ.ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್, ವಿಜಯ ಭರಮಸಾಗರ, ರಾಜಶೇಖರ್ ಸಾಹಿತ್ಯವಿದೆ. ವಿಜಯರಾಘವೇಂದ್ರ, ರಾಧಿಕಾ ಪ್ರೀತಿ, ರವಿಶಂಕರ್, ಶೋಭರಾಜ್, ತಬಲಾನಾಣಿ, ಮಿತ್ರ, ರಾಜೇಶ್ ಅಡಿಗ, ಪೆಟ್ರೋಲ್ ಪ್ರಸನ್ನ, ಶುಭಾ ಪೂಂಜಾ, ನೀನಾಸಂ, ನಿರಂಜನ್, ಭವ್ಯಾ, ಮೋಹನ್ ಜುನೇಜಾ, ಮಜಾ ಟಾಕೀಸ್ ಪವನ್, ಪ್ರತಾಪ್, ರಂಗತೇಜ, ಮೂಗ್ ಸುರೇಶ್, ಮುಂತಾದವರು ತಾರಾಬಳಗದಲ್ಲಿದ್ದಾರೆ.

ಯಾರ್ ಯಾರೋ ಗೋರಿ ಮೇಲೆ
ಎ. ಪುಟ್ಟರಾಜು ನಿರ್ಮಾಣದ, ರಾಘುಚಂದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಸಿನಿಮಾ ಇದು. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾನಕ ಹೊಂದಿರುವ ಈ ಚಿತ್ರಕ್ಕೆ ಪ್ರದೀಪ್ ಗಾಂಧಿ ಛಾಯಾಗ್ರಹಣ, ಲೋಕಿ ಸಂಗೀತ ಇದೆ. ರಾಜ್, ಅಭಿ, ವರ್ಷಾ, ಮಾರುತಿ, ತಿಪ್ಪೇಶ್, ವರುಣ್, ಹೇಮಾವತಿ, ದತ್ತಾತ್ರೇಯ, ರಾಜು, ಕಿರಣ್, ಸಿದ್ದು, ಚೇತನಾ ತಾರಾಬಳಗದಲ್ಲಿದ್ದಾರೆ.

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಸುದರ್ಶನ್ ಜಿ., ರಾಮಮೂರ್ತಿ ಎಚ್. ಆರ್. ಹಾಗೂ ಅಕ್ಮೆ ಮೂವೀಸ್ ಹರೀಶ್ ಶೇರಿಗಾರ್‌ ನಿರ್ಮಾಣದ ಈ ಚಿತ್ರವನ್ನು ನರೇಂದ್ರಬಾಬು ನಿರ್ದೇಶಿಸಿದ್ದಾರೆ. ಅನಂತ್ ನಾಗ್ ಹಾಗೂ ರಾಧಿಕಾ ಚೇತನ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯವನ್ನೂ ನರೇಂದ್ರ ಬಾಬು ಅವರೇ ರಚಿಸಿದ್ದಾರೆ. ಪಿ. ಕೆ. ಎಚ್. ದಾಸ್ ಛಾಯಾಗ್ರಹಣ, ರಾಮಚಂದ್ರ ಹಡಪದ ಸಂಗೀತ ಚಿತ್ರಕ್ಕಿದೆ.

ರಾಮಧಾನ್ಯ
ದಶಮುಖ ವೆಂಚರ್ಸ್ ಅಡಿಯಲ್ಲಿ 10 ನಿರ್ಮಾಪಕರು ಹಣ ಹೂಡಿರುವ ಈ ಚಿತ್ರವನ್ನು ಟಿ.ಎನ್. ನಾಗೇಶ್‌ ನಿರ್ದೇಶಿಸಿದ್ದಾರೆ. ವೆಂಕಟೇಶ್ ಸವನೂರ್, ಜಂಬಣ್ಣ ಬಿ ಹವಳದ, ಸಂತೋಷ್ ಅಂಗಡಿ, ಅನಿಲಕುಮಾರ್‌ ಪವಳಿ, ಆರ್ ಗೋವಿಂದರಾಜು, ಮಲ್ಲೇಶ್ ರಾಜ ಗಂಧರ್ವ, ಎಸ್. ಎನ್. ರಾಜಶೇಖರ್ ಬೂದಲ್ ಹಾಗೂ ಮಹಾಂತೇಶ್‌ ತಾಂವಶಿ ಹಣ ಹೂಡಿದ್ದಾರೆ.

ರಾಮ, ಕನಕದಾಸ ಹಾಗೂ ಇಂದಿನ ಪೀಳಿಗೆಯ ಪಾತ್ರವನ್ನು ಯಶಸ್ ಸೂರ್ಯ ಹಾಗೂ ನಿಮಿಕಾ ರತ್ನಾಕರ್ ನಿರ್ವಹಿಸಿದ್ದಾರೆ. ದೇಸೀ ಮೋಹನ್ ಅವರ ಸಂಗೀತ, ಬೆನಕ ರಾಜು ಛಾಯಾಗ್ರಹಣ, ಬಸವರಾಜ್ ಸೂಳೆರಿಪಾಳ್ಯ ಸಂಭಾಷಣೆ  ಚಿತ್ರಕ್ಕಿದೆ.

ಪರಿಧಿ
‘ಪರಿಧಿ’ ಮೂಕಿ ಚಿತ್ರ.  ಕಥಾ ನಾಯಕ ಐಶಾರಾಮಿ ಜೀವನದ ಆಸೆಗೆ ಬಲಿಯಾಗಿ ಗೊತ್ತಿಲ್ಲದ ಹಾಗೆ ಅಪರಾಧ ಜಗತ್ತಿಗೆ ಕಾಲಿಡುತ್ತಾನೆ. ಚಿತ್ರ ವಿಚಿತ್ರ ಘಟನೆಗಳು ಅವನ ಸುತ್ತ ಜರುಗುತ್ತವೆ. ಸಿಲುಕಿರುವ ವರ್ತುಲದಿಂದ ಹೇಗೆ ಪಾರಾಗುತ್ತಾನೆ ಎಂಬುದನ್ನು ನಿರ್ದೇಶಕ ಎಸ್‌.ಬಿ. ಶ್ರೀನಿವಾಸ್‌ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದಾರೆ. ಜೀವ ಆಂಟೋನಿ ಛಾಯಾಗ್ರಹಣ, ನಿತೀಶ್ ಕುಮಾರ್ ಸಂಕಲನ, ಸೂರಜ್ ಮಹಾದೇವ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

‘ರಾಜ್ ಕಿರಣ್, ದಿವ್ಯಾ, ನಿಶಾ, ಅಮರನಾಥ್, ಚಂದ್ರಶೇಖರ್, ಭದ್ರಾವತಿ ಶ್ರೀನಿವಾಸ್ ಹಾಗೂ ಮಂಜುಳಾ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT