ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಜಗತ್ತಿಗೆ ಕೈಗನ್ನಡಿ

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
Last Updated 24 ಮೇ 2018, 19:30 IST
ಅಕ್ಷರ ಗಾತ್ರ

*ಸಿನಿಮಾ ಶೀರ್ಷಿಕೆ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಅಂತಿದೆ. ಆದರೆ ಟ್ರೈಲರ್‌ ನೋಡಿದರೆ ಇದು ಶ್ರೀಮಂತ ಜಗತ್ತಿನ ಕಥೆಯಂತೆ ತೋರುತ್ತದಲ್ಲ...
ಇದು ಐಟಿ ಕಂಪನಿಯ ಪರಿಸರದಲ್ಲಿ ನಡೆಯುವ ಕಥೆ. ಬದುಕಿಡೀ ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡಿ ನಿವೃತ್ತನಾಗಿರುವ ಮನುಷ್ಯನಿಗೆ ಜೀವನಭದ್ರತೆಗಾಗಿ ಮತ್ತೆ ಕೆಲಸ ಮಾಡುವ ಅನಿವಾರ್ಯತೆ ಬರುತ್ತದೆ. ಆದರೆ ಪ್ರಕಾಶನ ಸಂಸ್ಥೆ ಮುಚ್ಚಿರುತ್ತದೆ. ಆದ್ದರಿಂದ ಆ ಮನುಷ್ಯ ಐಟಿ ಕ್ಷೇತ್ರದಲ್ಲಿಯೇ ಕೆಲಸ ಮಾಡಬೇಕಾಗುತ್ತದೆ. ಹೆಸರು, ಸೋಷಿಯಲ್‌ ಸ್ಟೇಟಸ್‌ ಎಲ್ಲವೂ ಇದ್ದು ದುಡಿಯಲೇಬೇಕಾದ ಅನಿವಾರ್ಯತೆ ಅವನದು. ‘ದಾಂಪತ್ಯವೇ ದೇವರು’ ಎಂದು ನಂಬಿರುವ ಮನುಷ್ಯ, ಲೀವಿಂಗ್ ರಿಲೇಷನ್‌ನ ಜಗತ್ತಿನಲ್ಲಿ ದಿಕ್ಕೆಡುತ್ತಾನೆ. ಆದರೆ  ಆತ್ಮಸ್ಥೈರ್ಯದಿಂದಲೇ ತನ್ನ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾನೆ. ಹೊಸ ಪೀಳಿಗೆಯ ಜತೆಗೇ ಇದ್ದು ಅವರಿಗೆ ಮಾನಸಿಕ ಸ್ಥೈರ್ಯ ತುಂಬುವವನ ಕಥೆ ಇದು.

*ಇಂಥದ್ದೊಂದು ಸಿನಿಮಾ ಮಾಡಬೇಕು ಎಂದು ನಿಮಗೆ ಯಾಕೆ ಅನಿಸಿತು?
‘ಕಬೀರ’ ಸಿನಿಮಾ ಮಾಡಿದ ಮೇಲೆ ತಕ್ಷಣಕ್ಕೆ ಇನ್ನೊಂದು ಸಿನಿಮಾ ಮಾಡುವ ಅನಿವಾರ್ಯತೆ ಇತ್ತು. ನನ್ನ ಬಳಿ ಒಂದು ಸಾಹಿತ್ಯ ಕೃತಿ ಮತ್ತು ಇನ್ನೊಂದು ಸಂಗೀತ ಸಾಧಕರ ಜೀವನಚರಿತ್ರೆಯ ಎರಡು ಕಥೆಗಳಿದ್ದವು. ಈ ಸಮಯದಲ್ಲಿಯೇ ನನ್ನ ಗೆಳೆಯ ಸುದರ್ಶನ್‌ ಅವರು ‘ನೀನು ಅನಂತನಾಗ್‌ ಅವರನ್ನು ಇಟ್ಟುಕೊಂಡು ಸಿನಿಮಾ ಮಾಡುವುದಾದರೆ ನಾನು ನನ್ನ ಸ್ನೇಹಿತ ರಾಮಮೂರ್ತಿ ಸೇರಿ ಹಣ ಹೂಡುತ್ತೇವೆ’ ಎಂದು ಹೇಳಿದರು. ಅವರ ಬಳಿ ಒಂದು ಕಥೆಯ ಎಳೆಯೂ ಇತ್ತು. ಪೀಳಿಗೆಗಳ ನಡುವಿನ ಅಂತರವನ್ನು ಹೇಳುವ ಆ ಕಥೆಗೆ ಲೀವಿಂಗ್ ರಿಲೇಷನ್‌ನ ದೃಷ್ಟಿಕೋನವನ್ನೂ ಸೇರಿಸಿ ಇನ್ನಷ್ಟು ಬೆಳೆಸಿದೆ. ನಂತರ ಅನಂತ್‌ ನಾಗ್‌ ಅವರ ಬಳಿ ಹೋದೆ. ಅವರು ಕಥೆ ಓದಿ ತುಂಬ ಖುಷಿಯಿಂದ ಒಪ್ಪಿಕೊಂಡರು.

* ‘ಕಬೀರ’ ಸಿನಿಮಾದ ಅನುಭವದಿಂದ ನಿಮ್ಮೊಳಗಿನ ನಿರ್ದೇಶಕ ಕಲಿತ ಪಾಠವೇನು?
ಕಬೀರ ಸಿನಿಮಾವನ್ನು ನಾವು ಮೂರು ವರ್ಷ ತೆಗೆದುಕೊಂಡು ಮಾಡಿದ್ದು. ಒಂದೂವರೆ ವರ್ಷ ಸಂಶೋಧನೆಯನ್ನೇ ಮಾಡಿದ್ದೆವು. ಬಹಳ ಮಹತ್ವಾಕಾಂಕ್ಷೆಯ ಜತೆಗೆ ತುಂಬ ಶ್ರದ್ಧೆಯಿಂದ ಮಾಡಿದ ಸಿನಿಮಾ ಅದು. ಆದರೆ ಬಿಡುಗಡೆ ಮಾಡಿದ ಸಮಯ ಸರಿ ಇರಲಿಲ್ಲ. ಹಾಗಾಗಿ ಸಿನಿಮಾ ಸೋತಿತು. ಅದೊಂದು ಬಿಟ್ಟರೆ ತುಂಬ ಒಳ್ಳೆಯ ಅನುಭವ ಕೊಟ್ಟ ಸಿನಿಮಾ ಅದು. ಆದರೆ ಆ ಚಿತ್ರ ಬಿಡುಗಡೆಯಾದಾಗ ಇಡೀ ಚಿತ್ರರಂಗ ಮೌನ ತಾಳಿತು. ಬೇರೆ ಎಲ್ಲೇ ಆಗಿದ್ದರೂ ಇಂಥ ಸಿನಿಮಾದ ಬಗ್ಗೆ ಮಾತಾಡಿ, ಚರ್ಚೆ ಮಾಡುತ್ತಿದ್ದರು. ಆದರೆ ನಮ್ಮಲ್ಲಿ ಅದು ಆಗಲೇ ಇಲ್ಲ. ಒಂದೊಮ್ಮೆ ಜನರು ಒಪ್ಪಿಕೊಂಡುಬಿಟ್ಟಿದ್ದರೆ ಚಿತ್ರರಂಗದ ಮೌನವನ್ನು ನಾನು ಎಂಜಾಯ್‌ ಮಾಡ್ತಿದ್ದೆ. ಆದರೆ ಜನರೂ ಕೈಬಿಟ್ಟುಬಿಟ್ಟರು.

* ಕನ್ನಡದ ಸಿನಿಮಾ ಪ್ರೇಕ್ಷಕರು ಲೀವಿಂಗ್ ರಿಲೇಷನ್‌ನಂಥ ಆಧುನಿಕ ವಸ್ತುವಿಗೆ ಮಾನಸಿಕವಾಗಿ ಸಿದ್ಧಗೊಂಡಿದ್ದಾರೆ ಅನಿಸುತ್ತದೆಯೇ?
ಸಿನಿಮಾದ ಕುರಿತು ಹೇಳಿದಾಗ ಅನಂತ್‌ನಾಗ್‌ ಅವರಿಗೂ ಇದೇ ಅನುಮಾನ ಕಾಡಿತ್ತು. ‘ಮೊದಲು ಸ್ಕ್ರಿಫ್ಟ್‌ ಬರೆದುಕೊಂಡು ಬನ್ನಿ, ಆಮೇಲೆ ನೋಡೋಣ’ ಎಂದೇ ಹೇಳಿದ್ದರು. ನಾನೊಂದು ರಫ್‌ ಸ್ಕ್ರಿಫ್ಟ್‌ ಬರೆದುಕೊಂಡು ಹೋದೆ. ಅದು ಅವರಿಗೆ ಇಷ್ಟವಾಗಿ ಇನ್ನಷ್ಟು ತಿದ್ದಿದರು. ನಮ್ಮ ಕಥೆಯಲ್ಲಿ ‘ಪ್ರಪಂಚದ ಎಲ್ಲ ಧರ್ಮಗಳೂ ಜೀವವಿರೋಧಿ ನಿಲುವನ್ನು ವಿರೋಧಿಸುತ್ತವೆ’ ಎಂಬ ಒಂದು ಅಂತರ್ಗತ ಧ್ವನಿ ಇದೆ. ಅದು ಅವರಿಗೆ ತುಂಬ ಇಷ್ಟವಾಯ್ತು. ಇದು ಕನ್ನಡದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನಮ್ಮದು.

* ಚಿತ್ರತಂಡದ ಬಗ್ಗೆ ಹೇಳಿ.
ನನಗೆ ಹೊಸ ಪ್ರತಿಭಾವಂತರ ಬಗ್ಗೆ ಒಲವು ಹೆಚ್ಚು. ಅಂಥವರ ಒಂದು ಹಿಂಡು ಯಾವಾಗಲೂ ನನ್ನ ಜತೆಗೆ ಇರುತ್ತಾರೆ. ಈ ಚಿತ್ರದಲ್ಲಿಯೂ ಹಾಗೆಯೇ ಆಗಿದೆ. ‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ ನಾಯಿ ಪಾತ್ರ ಮಾಡಿದ್ದ ಅನಿಲ್‌ ಎಂಬ ಹುಡುಗನಿಗೆ ಮುಖ್ಯಪಾತ್ರ ನೀಡಿದ್ದೇನೆ. ಸ್ಮಿತಾ ಕುಲಕರ್ಣಿ ಎಂಬ ಪ್ರತಿಭಾನ್ವಿತ ನಟಿಯೂ ಇದ್ದಾರೆ. ಹಲವು ವರ್ಷಗಳ ಒಡನಾಟದಲ್ಲಿದ್ದ ಸಂದೀಪ್ ಅರಸು ಅವರಿಗೂ ಒಂದು ಪಾತ್ರ ಕೊಟ್ಟಿದ್ದೇನೆ. ರಂಗಭೂಮಿಯ ಹಲವು ಸಾಮಾನ್ಯ ನಾಟಕಗಳನ್ನು ತನ್ನ ಸಂಗೀತದ ಮೂಲಕ ಮೇಲೆತ್ತಿದ ಪ್ರತಿಭಾವಂತ ರಾಮಚಂದ್ರ ಹಡಪದ್ ಅವರಿಗೆ ಸಂಗೀತ ನಿರ್ದೇಶನದ ಜವಾಬ್ದಾರಿ ನೀಡಿದ್ದೇನೆ. ಹೀಗೆ ಹಲವು ಹೊಸಬರ ಜತೆ ಸೇರಿಕೊಂಡು ಮಾಡಿದ ಸಿನಿಮಾ ಇದು.

* ನಿಮ್ಮ ಸಿನಿಮಾಗೆ ಪ್ರೇಕ್ಷಕರನ್ನು ಯಾವ ರೀತಿ ಆಮಂತ್ರಣ ನೀಡಲು ಬಯಸುತ್ತೀರಿ?
ಬೆಂಗಳೂರನ್ನು ಸಿಲಿಕಾನ್‌ ವ್ಯಾಲಿ ಎಂದು ಕರೆಯುತ್ತಾರೆ. ಆದರೆ ಬೆಂಗಳೂರಿನ ಐಟಿ ಬಿಟಿ ಜಗತ್ತಿಗೆ ಸಂಬಂಧಿಸಿದಂತೆ ಸಿನಿಮಾ ಮಾಡುವ ಪ್ರಯತ್ನಗಳು ಆಗಲೇ ಇಲ್ಲ. ಕಳೆದ ಹತ್ತು ಹದಿನೈದು ವರ್ಷಗಳಿಂದ ನಗರ ಜೀವನಕ್ರಮ, ಅಭಿರುಚಿ, ಆಸೆ, ನೋವು, ಸೆಡವು ಎಲ್ಲವೂ ಈ ಐಟಿ ಜಗತ್ತಿನೊಂದಿಗೇ ಜೋಡಿಸಿಕೊಂಡಿದೆ. ಆ ಜಗತ್ತಿನಿಂದ ಚಿತ್ರರಂಗಕ್ಕೆ ಸಾಕಷ್ಟು ಪ್ರತಿಭಾವಂತರು ಬಂದಿದ್ದಾರೆ. ಆದರೆ ಅವರೆಲ್ಲರೂ ಬೇರೆ ಬೇರೆ ರೀತಿಗಳಲ್ಲಿ ಬಳಕೆಯಾಗುತ್ತಿದ್ದಾರೆಯೇ ಹೊರತು, ಆದರೆ ಇಷ್ಟು ವರ್ಷ ಆದರೂ ಕನ್ನಡದಲ್ಲಿ ಐಟಿ ಜಗತ್ತಿನ ಬದುಕನ್ನು ಪರಿಪೂರ್ಣವಾಗಿ ದಾಖಲಿಸುವ ಪ್ರಯತ್ನಗಳು ಆಗಿಲ್ಲ. ಹಾಗಾಗಿ  ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದ ಮೂಲಕ ನಾವು ಈ ಪ್ರಯತ್ನ ಮಾಡುತ್ತಿದ್ದೇವೆ. ಇದೊಂದು ಬಗೆಯಲ್ಲಿ ನಗರದ ಆತ್ಮಕತೆ. ಆದರೆ ಅಲ್ಲಿ ಗ್ರಾಮೀಣ ಸೊಗಡಿನ ಮುಖಾಮುಖಿಯಿದೆ.

* ‘ಕಬೀರ’ ಸಿನಿಮಾದ ಅನುಭವದಿಂದ ನಿಮ್ಮೊಳಗಿನ ನಿರ್ದೇಶಕ ಕಲಿತ ಪಾಠವೇನು?
ಕಬೀರ ಸಿನಿಮಾವನ್ನು ನಾವು ಮೂರು ವರ್ಷ ತೆಗೆದುಕೊಂಡು ಮಾಡಿದ್ದು. ಒಂದೂವರೆ ವರ್ಷ ಸಂಶೋಧನೆಯನ್ನೇ ಮಾಡಿದ್ದೆವು. ಬಹಳ ಮಹತ್ವಾಕಾಂಕ್ಷೆಯ ಜತೆಗೆ ತುಂಬ ಶ್ರದ್ಧೆಯಿಂದ ಮಾಡಿದ ಸಿನಿಮಾ ಅದು. ಆದರೆ ಬಿಡುಗಡೆ ಮಾಡಿದ ಸಮಯ ಸರಿ ಇರಲಿಲ್ಲ. ಹಾಗಾಗಿ ಸಿನಿಮಾ ಸೋತಿತು. ಅದೊಂದು ಬಿಟ್ಟರೆ ತುಂಬ ಒಳ್ಳೆಯ ಅನುಭವ ಕೊಟ್ಟ ಸಿನಿಮಾ ಅದು. ಆದರೆ ಆ ಚಿತ್ರ ಬಿಡುಗಡೆಯಾದಾಗ ಇಡೀ ಚಿತ್ರರಂಗ ಮೌನ ತಾಳಿತು. ಬೇರೆ ಎಲ್ಲೇ ಆಗಿದ್ದರೂ ಇಂಥ ಸಿನಿಮಾದ ಬಗ್ಗೆ ಮಾತಾಡಿ, ಚರ್ಚೆ ಮಾಡುತ್ತಿದ್ದರು. ಆದರೆ ನಮ್ಮಲ್ಲಿ ಅದು ಆಗಲೇ ಇಲ್ಲ. ಒಂದೊಮ್ಮೆ ಜನರು ಒಪ್ಪಿಕೊಂಡುಬಿಟ್ಟಿದ್ದರೆ ಚಿತ್ರರಂಗದ ಮೌನವನ್ನು ನಾನು ಎಂಜಾಯ್‌ ಮಾಡ್ತಿದ್ದೆ. ಆದರೆ ಜನರೂ ಕೈಬಿಟ್ಟುಬಿಟ್ಟರು.

* ಕನ್ನಡದ ಸಿನಿಮಾ ಪ್ರೇಕ್ಷಕರು ಲಿವ್–ಇನ್ ರಿಲೇಷನ್‌ನಂಥ ಆಧುನಿಕ ವಸ್ತುವಿಗೆ ಮಾನಸಿಕವಾಗಿ ಸಿದ್ಧಗೊಂಡಿದ್ದಾರೆ ಅನಿಸುತ್ತದೆಯೇ?
ಸಿನಿಮಾದ ಕುರಿತು ಹೇಳಿದಾಗ ಅನಂತ್‌ನಾಗ್‌ ಅವರಿಗೂ ಇದೇ ಅನುಮಾನ ಕಾಡಿತ್ತು. ‘ಮೊದಲು ಸ್ಕ್ರಿಪ್ಟ್ ಬರೆದುಕೊಂಡು ಬನ್ನಿ, ಆಮೇಲೆ ನೋಡೋಣ’ ಎಂದೇ ಹೇಳಿದ್ದರು. ನಾನೊಂದು ರಫ್‌ ಸ್ಕ್ರಿಪ್ಟ್‌ ಬರೆದುಕೊಂಡು ಹೋದೆ. ಅದು ಅವರಿಗೆ ಇಷ್ಟವಾಗಿ ಇನ್ನಷ್ಟು ತಿದ್ದಿದರು. ನಮ್ಮ ಕಥೆಯಲ್ಲಿ ‘ಪ್ರಪಂಚದ ಎಲ್ಲ ಧರ್ಮಗಳೂ ಜೀವವಿರೋಧಿ ನಿಲುವನ್ನು ವಿರೋಧಿಸುತ್ತವೆ’ ಎಂಬ ಒಂದು ಅಂತರ್ಗತ ಧ್ವನಿ ಇದೆ. ಅದು ಅವರಿಗೆ ತುಂಬ ಇಷ್ಟವಾಯ್ತು. ಇದು ಕನ್ನಡದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ನಮ್ಮದು.

* ಚಿತ್ರತಂಡದ ಬಗ್ಗೆ ಹೇಳಿ.
ನನಗೆ ಹೊಸ ಪ್ರತಿಭಾವಂತರ ಬಗ್ಗೆ ಒಲವು ಹೆಚ್ಚು. ಅಂಥವರ ಒಂದು ಹಿಂಡು ಯಾವಾಗಲೂ ನನ್ನ ಜತೆಗೆ ಇರುತ್ತಾರೆ. ಈ ಚಿತ್ರದಲ್ಲಿಯೂ ಹಾಗೆಯೇ ಆಗಿದೆ. ‘ಮಲೆಗಳಲ್ಲಿ ಮದುಮಗಳು’ ನಾಟಕದಲ್ಲಿ ನಾಯಿ ಪಾತ್ರ ಮಾಡಿದ್ದ ಅನಿಲ್‌ ಎಂಬ ಹುಡುಗನಿಗೆ ಮುಖ್ಯಪಾತ್ರ ನೀಡಿದ್ದೇನೆ. ಸ್ಮಿತಾ ಕುಲಕರ್ಣಿ ಎಂಬ ಪ್ರತಿಭಾನ್ವಿತ ನಟಿಯೂ ಇದ್ದಾರೆ. ಹಲವು ವರ್ಷಗಳ ಒಡನಾಟದಲ್ಲಿದ್ದ ಸಂದೀಪ್ ಅರಸು ಅವರಿಗೂ ಒಂದು ಪಾತ್ರ ಕೊಟ್ಟಿದ್ದೇನೆ. ರಂಗಭೂಮಿಯ ಹಲವು ಸಾಮಾನ್ಯ ನಾಟಕಗಳನ್ನು ತನ್ನ ಸಂಗೀತದ ಮೂಲಕ ಮೇಲೆತ್ತಿದ ಪ್ರತಿಭಾವಂತ ರಾಮಚಂದ್ರ ಹಡಪದ್ ಅವರಿಗೆ ಸಂಗೀತ ನಿರ್ದೇಶನದ ಜವಾಬ್ದಾರಿ ನೀಡಿದ್ದೇನೆ. ಹೀಗೆ ಹಲವು ಹೊಸಬರ ಜತೆ ಸೇರಿಕೊಂಡು ಮಾಡಿದ ಸಿನಿಮಾ ಇದು.

* ನಿಮ್ಮ ಸಿನಿಮಾಗೆ ಪ್ರೇಕ್ಷಕರಿಗೆ ಯಾವ ರೀತಿ ಆಮಂತ್ರಣ ನೀಡಲು ಬಯಸುತ್ತೀರಿ?
ಬೆಂಗಳೂರನ್ನು ಸಿಲಿಕಾನ್‌ ವ್ಯಾಲಿ ಎಂದು ಕರೆಯುತ್ತಾರೆ. ಆದರೆ ಬೆಂಗಳೂರಿನ ಐಟಿ ಬಿಟಿ ಜಗತ್ತಿಗೆ ಸಂಬಂಧಿಸಿದಂತೆ ಸಿನಿಮಾ ಮಾಡುವ ಪ್ರಯತ್ನಗಳು ಆಗಲೇ ಇಲ್ಲ. ಕಳೆದ ಹತ್ತು ಹದಿನೈದು ವರ್ಷಗಳಿಂದ ನಗರ ಜೀವನಕ್ರಮ, ಅಭಿರುಚಿ, ಆಸೆ, ನೋವು, ಸೆಡವು ಎಲ್ಲವೂ ಈ ಐಟಿ ಜಗತ್ತಿನೊಂದಿಗೇ ಜೋಡಿಸಿಕೊಂಡಿದೆ. ಆ ಜಗತ್ತಿನಿಂದ ಚಿತ್ರರಂಗಕ್ಕೆ ಸಾಕಷ್ಟು ಪ್ರತಿಭಾವಂತರು ಬಂದಿದ್ದಾರೆ. ಆದರೆ ಅವರೆಲ್ಲರೂ ಬೇರೆ ಬೇರೆ ರೀತಿಗಳಲ್ಲಿ ಬಳಕೆಯಾಗುತ್ತಿದ್ದಾರೆಯೇ ಹೊರತು, ಆದರೆ ಇಷ್ಟು ವರ್ಷ ಆದರೂ ಕನ್ನಡದಲ್ಲಿ ಐಟಿ ಜಗತ್ತಿನ ಬದುಕನ್ನು ಪರಿಪೂರ್ಣವಾಗಿ ದಾಖಲಿಸುವ ಪ್ರಯತ್ನಗಳು ಆಗಿಲ್ಲ. ಹಾಗಾಗಿ  ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದ ಮೂಲಕ ನಾವು ಈ ಪ್ರಯತ್ನ ಮಾಡುತ್ತಿದ್ದೇವೆ. ಇದೊಂದು ಬಗೆಯಲ್ಲಿ ನಗರದ ಆತ್ಮಕತೆ. ಆದರೆ ಅಲ್ಲಿ ಗ್ರಾಮೀಣ ಸೊಗಡಿನ ಮುಖಾಮುಖಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT