ಬೆಂಗಳೂರು ಸುತ್ತಮುತ್ತ ‘ಸಿಗ್ನೇಚರ್’

7

ಬೆಂಗಳೂರು ಸುತ್ತಮುತ್ತ ‘ಸಿಗ್ನೇಚರ್’

Published:
Updated:
ಬೆಂಗಳೂರು ಸುತ್ತಮುತ್ತ ‘ಸಿಗ್ನೇಚರ್’

ನವೀನ್ ಸರಸ್ವತ್ ಹಾಗೂ ಪೂರ್ಣಿಮಾ ಭಾಸ್ಕರ್ ಪೂಜಾರಿ ಅವರು ನಿರ್ಮಿಸುತ್ತಿರುವ ‘ಸಿಗ್ನೇಚರ’ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಈ ಹಂತದ ಚಿತ್ರೀಕರಣ ಹದಿನೈದು ದಿನಗಳ ಕಾಲ ನಡೆಯಲಿದ್ದು, ಮಾತಿನ ಭಾಗದ ಹಾಗೂ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

ಪೂರ್ಣಿಮಾ ಭಾಸ್ಕರ್ ಪೂಜಾರಿ ಅವರು ಬರೆದಿರುವ ಕಥೆಗೆ ಗುರು ಮದ್ಲೇಸರ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮನೋಹರ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಜೀವನ್ ಗೌಡ ಛಾಯಾಗ್ರಹಣವಿದೆ. ವಿ.ಮನೋಹರ್, ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ಹಾಡುಗಳನ್ನು ಬರೆದಿದ್ದಾರೆ.

ಮಯೂರಿ, ಬೇಬಿ ಮಾನ್ಯಾ, ವಾಣಿಶ್ರೀ, ಬಚ್ಚನ್, ಸುನೀಲ್ ಪುರಾಣಿಕ್, ಸೂರ್ಯಕಿರಣ್ (ರಾಧಾ ರಮಣ), ಆರ್ಯನ್, ಬೋಜರಾಜ್, ಕೋಣಿ ಶಿವಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry