ಅಪ್ಪ ಮಗಳ ಬಾಂಧವ್ಯದ ‘ಕಲ್ಯಾಣ’

7

ಅಪ್ಪ ಮಗಳ ಬಾಂಧವ್ಯದ ‘ಕಲ್ಯಾಣ’

Published:
Updated:
ಅಪ್ಪ ಮಗಳ ಬಾಂಧವ್ಯದ ‘ಕಲ್ಯಾಣ’

ಶ್ವೇತಾ ನಂದಾ ಬಚ್ಚನ್‌, ಅಮಿತಾಭ್‌ ಬಚ್ಚನ್‌ ಮಗಳು. ನಂದಾ ಕುಟುಂಬದ ಸೊಸೆ. ಬರಹಗಾರ್ತಿ, ಅಂಕಣಕಾರ್ತಿ ಎಂದೇ ಗುರುತಿಸಿಕೊಂಡಿರುವವರು. ಇದೇ ಮೊದಲ ಸಲ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅದೂ ಅಮಿತಾಭ್‌ ಜೊತೆಗೆ. ‌

ಬಿಗ್‌ ಬಿಗೆ ಇದೊಂದು ಅಮೂಲ್ಯ ಕ್ಷಣ. ತಮ್ಮ ಕರುಳಕುಡಿಯೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ‘ಕಲ್ಯಾಣ್’ ಜ್ಯುವೆಲರ್ಸ್‌ನ ಜಾಹಿರಾತಿನಿಂದಾಗಿ. ಶ್ವೇತಾ ಬರವಣಿಗೆಯ ಬಗ್ಗೆ ಬಹುಜನರಿಗೆ ಗೊತ್ತಿದೆ. ಆದರೆ ಅವರು ಒಡವೆಗಳ ವಿನ್ಯಾಸಗಾರ್ತಿಯೂ ಹೌದು. ಅವರ ವಿನ್ಯಾಸಗಳನ್ನು ಕಲ್ಯಾಣ್‌ ಜ್ಯುವೆಲರ್ಸ್‌ ಜನರಿಗೆ ಸಮರ್ಪಿಸುತ್ತಿದೆ.

ಅಪ್ಪ ಮಗಳ ಮಧುರ ಬಾಂಧವ್ಯದಲ್ಲಿ ಹೊನ್ನ ಗಳಿಗೆ, ಹೊನ್ನಿನ ಮಹತ್ವ ಎರಡನ್ನೂ ಈ ಜಾಹಿರಾತಿನಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ಕಲ್ಯಾಣ್‌ ಜ್ಯುವೆಲರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾದ ರಮೇಶ್‌ ಕಲ್ಯಾಣ್‌ ರಾಮನ್‌. ‘ನಮ್ಮ ಬ್ರ್ಯಾಂಡ್‌ ಹೆಸರಾಗಿರುವುದೇ ನಂಬಿಕೆ ಮತ್ತು ಪಾರದರ್ಶಕತೆಯಿಂದಾಗಿ. ಇವೆರಡೂ ಗುಣಗಳನ್ನು ಎತ್ತಿಹಿಡಿಯುವ ಜಾಹಿರಾತಿನಲ್ಲಿ ಬಚ್ಚನ್‌ ಕುಟುಂಬ ಕಾಣಿಸಿಕೊಂಡಿದೆ.

ಕಲ್ಯಾಣ್‌ನ ಪ್ರಚಾರ ರಾಯಭಾರಿಯಾಗಿರುವ ಬಚ್ಚನ್‌ ಈ ಮೊದಲು ಜಯಾ ಬಚ್ಚನ್‌ ಜೊತೆಗೆ ಕಾಣಿಸಿಕೊಂಡಿದ್ದರು. ಇದೀಗ ಶ್ವೇತಾ ಜೊತೆಗೆ ಪರದೆ ಹಂಚಿಕೊಂಡಿದ್ದಾರೆ. ಶ್ವೇತಾ ನಂದಾ ಬಚ್ಚನ್‌ ಜಾಹಿರಾತು ಲೋಕದ ಮೂಲಕ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವುದು ಸಂತಸವೆನಿಸುತ್ತದೆ’ ಎಂದು ಹೇಳಿದ್ದಾರೆ.

ಅಪ್ಪ ಮಗಳ ಬಾಂಧವ್ಯವನ್ನು ಎಲ್‌.ಅಂಡ್‌ ಕೆ. ಸಾಚಿ ಅಂಡ್‌ ಸಾಚಿ ಸ್ಕ್ರಿಪ್ಟ್‌ ಬರೆದಿದ್ದು, ಸ್ಕಲ್ಪಟರ್‌ ಪ್ರೊಡಕ್ಷನ್‌ನ ಜಿ.ಬಿ. ವಿಜಯಕುಮಾರ್‌ ನಿರ್ದೇಶಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry