ರಸ್ತೆ ಅಪಘಾತ: ಇಬ್ಬರು ಕಲಾವಿದರ ಸಾವು

7

ರಸ್ತೆ ಅಪಘಾತ: ಇಬ್ಬರು ಕಲಾವಿದರ ಸಾವು

Published:
Updated:
ರಸ್ತೆ ಅಪಘಾತ: ಇಬ್ಬರು ಕಲಾವಿದರ ಸಾವು

ಹರಿಹರ: ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಗುರುವಾರ ಬೆಳಗಿನ ಜಾವ ನಡೆದ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಕಿರುತೆರೆ ನಿರೂಪಕ ಚಂದನ್ (38) ಹಾಗೂ ಸಹ ಕಲಾವಿದೆ ಸಂತೋಷಿ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬೈಲಹೊಂಗಲದಲ್ಲಿ ನಡೆಯುತ್ತಿರುವ ದುರ್ಗಾಂಬಿಕಾ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಹುಂಡೈ ಐ-20 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗಿನ ಜಾವ 3.30ರ ಸುಮಾರಿಗೆ ನಗರದ ಸಮೀಪವಿರುವ ಹನಗವಾಡಿ ಕ್ರಾಸ್‌ನ ಬಳಿ ನಿಲ್ಲಿಸಿದ್ದ ಲಾರಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಸೀಟ್‍ನಲ್ಲಿ ಕುಳಿತಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಮುಂಭಾಗದಲ್ಲಿ ಕುಳಿತಿದ್ದ ರಾಮಕೃಷ್ಣ ಹಾಗೂ ಆವರ ಪತ್ನಿ ಸುನಿತಾ ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಹೈಟೆಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry