30, 31ಕ್ಕೆ ಬ್ಯಾಂಕ್‌ ಮುಷ್ಕರ

7
ವೇತನ ‍ಪರಿಷ್ಕರಣೆ ಬೇಡಿಕೆ ಈಡೇರಿಸಲು ಒತ್ತಾಯ

30, 31ಕ್ಕೆ ಬ್ಯಾಂಕ್‌ ಮುಷ್ಕರ

Published:
Updated:
30, 31ಕ್ಕೆ ಬ್ಯಾಂಕ್‌ ಮುಷ್ಕರ

ಬೆಂಗಳೂರು: ಭಾರತೀಯ ಬ್ಯಾಂಕ್‌ಗಳ ಸಂಘವು (ಐಬಿಎ) ಮುಂದಿಟ್ಟಿರುವ ವೇತನ ಪರಿಷ್ಕರಣೆ ಪ್ರಸ್ತಾವ ವಿರೋಧಿಸಿ ಬ್ಯಾಂಕ್‌ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯು (ಯುಎಫ್‌ಬಿಯು) ಮೇ 30 ಮತ್ತು 31ರಂದು ಎರಡು ದಿನಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.

‘2017ರ ಮೇ ತಿಂಗಳಿನಿಂದಲೂ ‘ಐಬಿಎ’ ಜತೆ ಅನೇಕ ಸುತ್ತಿನ ಮಾತುಕತೆ ನಡೆದಿದ್ದರೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಫಲಪ್ರದವಾಗುವಂತಹ ಪ್ರಸ್ತಾವ ಬಂದಿಲ್ಲ. ಹೀಗಾಗಿ ಅನಿವಾರ್ಯವಾಗಿ ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆಯ (ಐಎನ್‌ಬಿಇಎಫ್) ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ. ನರಸಿಂಹ ಮೂರ್ತಿ ಮಾಹಿತಿ ನೀಡಿದ್ದಾರೆ.

ವೇತನ ಪರಿಷ್ಕರಣೆಯ ಬಗ್ಗೆ ಐಬಿಎ ಆಸಕ್ತಿ ತೋರಿಸದೇ ಇರವುದನ್ನು ಹಣಕಾಸು ಸಚಿವಾಲಯದ ಗಮನಕ್ಕೂ ತರಲಾಗಿದೆ. ಮೇ 5 ರಂದು ನಡೆದ ಸಂಧಾನ ಸಭೆಯಲ್ಲಿ, 2017ರ ಮಾರ್ಚ್ 31ರ ವೇತನ ವೆಚ್ಚದ ಮೊತ್ತದಲ್ಲಿ ಶೇ 2 ರಷ್ಟು ವೇತನ ಪರಿಷ್ಕರಣೆ ಮಾಡುವ ಹಾಗೂ ‘ವೇತನ ಶ್ರೇಣಿ–3’ರಲ್ಲಿ ಬರುವ ಅಧಿಕಾರಿಗಳವರೆಗೆ ಮಾತ್ರವೇ ವೇತನ ಪರಿಷ್ಕರಣೆ ಮಾಡುವ ಪ್ರಸ್ತಾವವನ್ನು ಐಬಿಎ ಮುಂದಿಟ್ಟಿತ್ತು.

ವೇತನ ಶ್ರೇಣಿ 1 ರಿಂದ 7ರವರೆಗೆ ಬರುವ ಅಧಿಕಾರಿಗಳಿಗೆ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಅಧಿಕಾರಿಗಳ ಬೇಡಿಕೆಯಾಗಿದೆ.

‘ಬ್ಯಾಂಕ್‌ಗಳ ಒಟ್ಟಾರೆ ಲಾಭಾಂಶ ಪ್ರತಿ ವರ್ಷ ಹೆಚ್ಚುತ್ತಲೇ ಇದೆ. 10 ವರ್ಷಗಳಲ್ಲಿ ಬ್ಯಾಂಕ್‌ಗಳ ಶೇ 70 ರಷ್ಟು ಲಾಭಾಂಶದ ಪಾಲು, ವಸೂಲಾಗದ ಸಾಲಗಳಿಗೆ ಮೀಸಲಿಡಲಾಗಿದೆ. ಇದರಿಂದ ನಷ್ಟ ಕಂಡುಬರುತ್ತಿದೆ. ಬ್ಯಾಂಕ್‌ಗಳ ಈ ಸ್ಥಿತಿಗೆ ನೌಕರರು ಮತ್ತು ಅಧಿಕಾರಿಗಳು ಹೊಣೆಗಾರರಲ್ಲ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry