ಅಲನ್‌ ಬಾರ್ಡರ್‌ ದಾಖಲೆ ಸರಿಗಟ್ಟಿದ ಅಲಸ್ಟೇರ್‌ ಕುಕ್‌

7

ಅಲನ್‌ ಬಾರ್ಡರ್‌ ದಾಖಲೆ ಸರಿಗಟ್ಟಿದ ಅಲಸ್ಟೇರ್‌ ಕುಕ್‌

Published:
Updated:
ಅಲನ್‌ ಬಾರ್ಡರ್‌ ದಾಖಲೆ ಸರಿಗಟ್ಟಿದ ಅಲಸ್ಟೇರ್‌ ಕುಕ್‌

ಲಂಡನ್‌ (ಎಎಫ್‌ಪಿ): ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಲಸ್ಟೇರ್‌ ಕುಕ್‌ ಅವರು ಗುರುವಾರ ಸತತ 153 ಟೆಸ್ಟ್‌ ಪಂದ್ಯಗಳನ್ನು ಆಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಪಾಕಿಸ್ತಾನ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಕುಕ್‌, ಈ ಶ್ರೇಯ ತಮ್ಮದಾಗಿಸಿಕೊಂಡರು. ಇದರೊಂದಿಗೆ ಆಸ್ಟ್ರೇಲಿಯಾದ ಅಲನ್‌ ಬಾರ್ಡರ್‌ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆಂಗ್ಲರ ನಾಡಿನ ತಂಡ ಮೊದಲ ಇನಿಂಗ್ಸ್‌ನಲ್ಲಿ 58.2 ಓವರ್‌ಗಳಲ್ಲಿ 184ರನ್‌ಗಳಿಗೆ ಆಲೌಟ್‌ ಆಯಿತು.

ಪ್ರಥಮ ಇನಿಂಗ್ಸ್‌ ಶುರುಮಾಡಿರುವ ಪಾಕಿಸ್ತಾನ ತಂಡ ದಿನದಾಟದ ಅಂತ್ಯಕ್ಕೆ 23 ಓವರ್‌ಗಳಲ್ಲಿ 1 ವಿಕೆಟ್‌ಗೆ 50ರನ್‌ ದಾಖಲಿಸಿದೆ.

ಸಂಕ್ಷಿಪ್ತ ಸ್ಕೋರ್‌

ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 58.2 ಓವರ್‌ಗಳಲ್ಲಿ 184 (ಅಲಸ್ಟೇರ್‌ ಕುಕ್‌ 70 ; ಮಹಮ್ಮದ್‌ ಅಬ್ಬಾಸ್‌ 23ಕ್ಕೆ4, ಹಸನ್‌ ಅಲಿ 51ಕ್ಕೆ4).

ಪಾಕಿಸ್ತಾನ, ‍ಪ್ರಥಮ ಇನಿಂಗ್ಸ್‌: 23 ಓವರ್‌ಗಳಲ್ಲಿ 1 ವಿಕೆಟ್‌ಗೆ 50 (ಅಜರ್‌ ಅಲಿ ಬ್ಯಾಟಿಂಗ್‌ 18).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry