ಬ್ಯಾಟ್ಸ್‌ಮನ್‌ಗಳ ವೈಫಲ್ಯ ಸೋಲಿಗೆ ಕಾರಣ: ಅಜಿಂಕ್ಯ ರಹಾನೆ

7

ಬ್ಯಾಟ್ಸ್‌ಮನ್‌ಗಳ ವೈಫಲ್ಯ ಸೋಲಿಗೆ ಕಾರಣ: ಅಜಿಂಕ್ಯ ರಹಾನೆ

Published:
Updated:
ಬ್ಯಾಟ್ಸ್‌ಮನ್‌ಗಳ ವೈಫಲ್ಯ ಸೋಲಿಗೆ ಕಾರಣ: ಅಜಿಂಕ್ಯ ರಹಾನೆ

ಕೋಲ್ಕತ್ತ: ‘ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ವಿರುದ್ಧ ನಮ್ಮ ಬ್ಯಾಟ್ಸ್‌ಮನ್‌ಗಳು ವಿಫಲವಾದರು. ಇದನ್ನು ಸಮರ್ಥಿಸಿಕೊಳ್ಳಲು ಯಾವುದೇ ಕಾರಣ ಬೇಕಿಲ್ಲ’ ಎಂದು ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಬೇಸರ ವ್ಯಕ್ತಪಡಿಸಿದರು.

ಬುಧವಾರ ಕೆಕೆಆರ್‌ ವಿರುದ್ಧದ ಪಂದ್ಯದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕೆಕೆಆರ್‌ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 169 ರನ್‌ ಗಳಿಸಿತು. ಗುರಿ ಬೆನ್ನತ್ತಿದ ರಾಜಸ್ಥಾನ್‌ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 144 ರನ್‌ ಗಳಿಸಿ ಸೋತಿತು.

‘ಸನ್‌ರೈಸರ್ಸ್‌ಗೆ ಹೋಲಿಸಿದರೆ ನಮ್ಮ ತಂಡದಲ್ಲಿ ಅಂತಹ ಅನುಭವಿ ಆಟಗಾರರಿಲ್ಲ. ಆದರೆ ನಮ್ಮ ಸೋಲಿಗೆ ಇದು ಕಾರಣವಾಗಬೇಕಿಲ್ಲ. ಹಿಂದಿನ ಪಂದ್ಯದಲ್ಲಿ ಇದೇ ಆಟಗಾರರನ್ನು ಹೊಂದಿದ್ದ ನಮ್ಮ ತಂಡವು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು ಮಣಿಸಿತ್ತು’ ಎಂದು ಅವರು ಹೇಳಿದ್ದಾರೆ.

‘170 ರನ್‌ಗಳ ಗುರಿ ತಲುಪುವುದು ಕಷ್ಟವೇನಿರಲಿಲ್ಲ. ಆದರೆ, ಅರ್ಧಶತಕ ಪೂರೈಸಿದ್ದ ಸಂಜು ಸ್ಯಾಮ್ಸನ್‌ ಅವರು 17ನೇ ಓವರ್‌ನಲ್ಲಿ ಔಟಾದರು. ಒತ್ತಡದ ಸಂದರ್ಭದಲ್ಲಿ ಪರಿಣತ ಬ್ಯಾಟ್ಸ್‌ಮನ್‌ಗಳು ಇರದಿದ್ದರೆ ಗುರಿ ಮುಟ್ಟುವುದು ಕಷ್ಟ’ ಎಂದು

ಅವರು ಅಭಿಪ್ರಾಯಪಟ್ಟರು.

‘ನಮ್ಮ ತಂಡವು ವಿಕೆಟ್‌ಗಳನ್ನು ಉಳಿಸಿಕೊಂಡಿತ್ತು. ಆದರೆ ಬಿರುಸಿನ ಆಟವಾಡುವಲ್ಲಿ ಬ್ಯಾಟ್ಸ್‌ಮನ್‌ಗಳು ವಿಫಲವಾದರು. ನಿರ್ಣಾಯಕ ಹಂತದಲ್ಲಿ ಕೆಲವು ಸಿಕ್ಸರ್‌ಗಳ ಅಗತ್ಯವಿತ್ತು. ಕೆಕೆಆರ್‌ ತಂಡವು ಶಿಸ್ತಿನ ಬೌಲಿಂಗ್‌ ಮಾಡಿತು. ಇಡೀ ಆವೃತ್ತಿಯಲ್ಲಿ ನಮ್ಮ ತಂಡ ಹೇಳಿಕೊಳ್ಳುವಂತಹ ಹೋರಾಟ ಮಾಡಲಿಲ್ಲ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry