ನಾಗೇಗೌಡಗೆ ಎರಡು ಚಿನ್ನದ ಪದಕ

7

ನಾಗೇಗೌಡಗೆ ಎರಡು ಚಿನ್ನದ ಪದಕ

Published:
Updated:
ನಾಗೇಗೌಡಗೆ ಎರಡು ಚಿನ್ನದ ಪದಕ

ಮಂಡ್ಯ: ಮದ್ದೂರು ತಾಲ್ಲೂಕು ಕರಡಕೆರೆಯ ಪ್ರಗತಿಪರ ರೈತ ಕೆ.ಎಂ.ನಾಗೇಶ್ ಅವರ ಪುತ್ರ ಕೆ.ಎನ್.ನಾಗೇಗೌಡ ಮೇ 15–18ರವರೆಗೆ ಬ್ಯಾಂಕಾಕ್‌ನಲ್ಲಿ ಏಷ್ಯನ್‌ ಟ್ರ್ಯಾಕ್ ಮತ್ತು ಟರ್ಫ್‌ ಫೆಡರೇಷನ್ (ಎಟಿಟಿಎಫ್) ವತಿಯಿಂದ ನಡೆದ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಶಾಟ್‌ಪಟ್‌ ಹಾಗೂ ಡಿಸ್ಕಸ್‌ ವಿಭಾಗದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಕೆ.ಎನ್.ನಾಗೇಗೌಡರು ಸೆಸ್ಕ್ ಮಂಡ್ಯ ಉಪವಿಭಾಗದಲ್ಲಿ ನೌಕರರಾಗಿದ್ದು, ಈಗಾಗಲೇ ಶ್ರೀಲಂಕಾ, ಉತ್ತರಪ್ರದೇಶ, ಜಾರ್ಖಂಡ್, ಹರಿಯಾಣ, ತಮಿಳುನಾಡು, ತೆಲಂಗಾಣ ಸೇರಿ ವಿವಿಧೆಡೆ ನಡೆದ ಹಲವು ಟೂರ್ನಿಗಳಲ್ಲಿ ಭಾಗವಹಿಸಿ ಪದಕ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry