ಚಾಮರಾಜನಗರದಲ್ಲಿ ಸಿಡಿಲು ಬಡಿದು ಮಹಿಳೆ ಸಾವು, ಮಗು ಪಾರು

7

ಚಾಮರಾಜನಗರದಲ್ಲಿ ಸಿಡಿಲು ಬಡಿದು ಮಹಿಳೆ ಸಾವು, ಮಗು ಪಾರು

Published:
Updated:
ಚಾಮರಾಜನಗರದಲ್ಲಿ ಸಿಡಿಲು ಬಡಿದು ಮಹಿಳೆ ಸಾವು, ಮಗು ಪಾರು

ಚಾಮರಾಜನಗರ: ಜಿಲ್ಲೆಯ ಬಿಸಿಲವಾಡಿಯಲ್ಲಿ ಸಿಡಿಲು ಬಡಿದು ಸೀತಾ (25) ಎಂಬುವವರು ಮೃತಪಟ್ಟಿದ್ದಾರೆ. 

ಸೇಲಂ ಜಿಲ್ಲೆಗೆ ಸೇರಿದ ಇವರು ಕೂಲಿ ಕೆಲಸಕ್ಕಾಗಿ ತಾಳವಾಡಿಯಿಂದ ನಡೆದುಕೊಂಡು ಬರುತ್ತಿದ್ದಾಗ ಸಿಡಿಲು ಬಡಿದಿದೆ. ಇವರ ಪತಿ ರಂಜನ್ ಹಾಗೂ ಮಗು ಅಪಾಯದಿಂದ ಪಾರಾಗಿದ್ದಾರೆ‌.

ರಾತ್ರಿ ಸುರಿದ ಮಳೆಯ ಹೊಡೆತಕ್ಕೆ ಹರದನಹಳ್ಳಿಯ ಬಂಡಿಗೇರಿಯಲ್ಲಿ ಎರಡು ಮನೆಗಳ ಗೋಡೆಗಳು ಕುಸಿದಿವೆ.

ಮಳೆ–ಗಾಳಿಯಿಂದ ಜಿಲ್ಲೆಯ ಸೇಂಟ್ ಜೋಸೆಫ್ ಆಸ್ಪತ್ರೆ ಆವರಣದಲ್ಲಿರುವ ಕೊಠಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ವಿದ್ಯುತ್ ಉಪಕರಣಗಳು ಸುಟ್ಟು ಹೋಗಿವೆ‌.

**30 ವರ್ಷಗಳಿಂದ ಬರಿದಾಗಿದ್ದ ದೊಡ್ಡ ಅರಸನ ಕೊಳ ಮಳೆನೀರಿನಿಂದ ಭರ್ತಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry