ನೂತನ ಮೆಥೋಡಿಸ್ಟ್ ಚರ್ಚ್ ಉದ್ಘಾಟನೆ

7

ನೂತನ ಮೆಥೋಡಿಸ್ಟ್ ಚರ್ಚ್ ಉದ್ಘಾಟನೆ

Published:
Updated:
ನೂತನ ಮೆಥೋಡಿಸ್ಟ್ ಚರ್ಚ್ ಉದ್ಘಾಟನೆ

ಬೀದರ್: ಇಲ್ಲಿಯ ಶಹಾಗಂಜ್‌ನಲ್ಲಿ ನೂತನವಾಗಿ ನಿರ್ಮಿಸಿದ ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್‌ನ್ನು ಗುರುವಾರ ಉದ್ಘಾಟಿಸಲಾಯಿತು.

ಬೆಂಗಳೂರಿನ ಬಿಷಪ್‌ ಎನ್‌.ಎಲ್‌. ಕರ್ಕರೆ ಉದ್ಘಾಟಿಸಿದರು. ಕಮಲಾ ಕರ್ಕರೆ ನಾಮಫಲಕ ಅನಾವರಣ ಗೊಳಿಸಿದರು.

ಇದಕ್ಕೂ ಮೊದಲು ಕರ್ಕರೆ ದಂಪತಿಯನ್ನು ನಗರದ ಅಂಬೇಡ್ಕರ್‌ ವೃತ್ತದ ಬಳಿ ಸ್ವಾಗತಿಸಿ ಮೆರವಣಿಗೆಯಲ್ಲಿ ಚರ್ಚ್‌ಗೆ ಕರೆ ತರಲಾಯಿತು.

ಸೇಂಟ್‌ ಪೌಲ್‌ ಮೆಥೋಡಿಸ್ಟ್‌ ಚರ್ಚ್‌ ಜಿಲ್ಲಾ ಮೇಲ್ವಿಚಾರಕ ಎಂ.ಪಿ. ಜಯಪಾಲ್‌, ಸಭಾಪಾಲಕ ಆಶೀರ್ವಾದಂ ಜೇಮ್ಸ್‌, ನಗರಸಭೆ ಮಾಜಿ ಸದಸ್ಯರಾದ ಕೆ. ರಾಮದಾಸ, ಶ್ರೀಧರ ಬಾಂಗ್ಲೆ, ಬೆಂಗಳೂರಿನ ಕ್ರಿಶ್ಚನ್‌ ಡೆವೆಲಪಮೆಂಟ್‌ ಕೌನ್ಸಿಲ್ ಸದಸ್ಯ ಜಾನ್‌ ವೆಸ್ಲಿ, ಪ್ರಮುಖರಾದ ಕೆ.ಪಿ. ಮೋಹನದಾಸ, ಎಸ್.ಪಿ. ರಾಜಶೇಖರ, ರಮೇಶ ಢೋಣೆ, ರವಿ ವಾಡೆಕರ್, ಹರೀಶ್‌ ಬಂಡಿ ಇದ್ದರು. ಉದ್ಘಾಟನಾ ಸಮಾರಂಭದ ಬಳಿಕ ಭಜನೆ ಸ್ಪರ್ಧೆ ನಡೆಯಿತು.ವಿವಿಧ ಭಜನಾ ತಂಡಗಳು ಭಾಗವಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry