ಕೆಸರು ಗದ್ದೆಯಾದ ನರಗುಂದ ಬಸ್‌ ನಿಲ್ದಾಣ

7

ಕೆಸರು ಗದ್ದೆಯಾದ ನರಗುಂದ ಬಸ್‌ ನಿಲ್ದಾಣ

Published:
Updated:
ಕೆಸರು ಗದ್ದೆಯಾದ ನರಗುಂದ ಬಸ್‌ ನಿಲ್ದಾಣ

ನರಗುಂದ: ಪಟ್ಟಣದ ಗ್ರಾಮೀಣ ಸಾರಿಗೆ ಬಸ್‌ ನಿಲ್ದಾಣ ಈಚೆಗೆ ಸುರಿದ ಮಳೆಯಿಂದಾಗಿ ಕೆಸರಿನ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಸಂಚರಿಸಲು ಪ್ರಯಾಣಿಕರು ಹರಸಾಹಸ ಪಡಬೇಕಿದೆ.

ತಾಲ್ಲೂಕು ಕೇಂದ್ರದಿಂದ 33 ಹಳ್ಳಿಗಳಿಗೆ ಬಸ್‌ಗಳು ಈ ನಿಲ್ದಾಣದಿಂದ ಸಂಚರಿಸುತ್ತವೆ. ಹುಬ್ಬಳ್ಳಿ–ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಬಸ್‌ ನಿಲ್ದಾಣಕ್ಕೆ ವಿಜಯಪುರ, ಸೊಲ್ಲಾಪುರ, ಕಲಬುರ್ಗಿ, ಬಾಗಲಕೋಟಿಗ ತೆರಳುವ ನೂರಾರು ಬಸ್‌ಗಳು ಬಂದು– ಹೋಗುತ್ತವೆ. ಸಾರಿಗೆ ಸಂಸ್ಥೆ ಗ್ರಾಮೀಣ ಬಸ್‌ ನಿಲ್ದಾಣದ ಬಗ್ಗೆ ಗಮನಹರಿಸಿಲ್ಲ ಎಂಬುದರ ಕುರಿತು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಬಸ್‌ ನಿಲ್ದಾಣದಲ್ಲಿ ವಿದ್ಯುತ್‌ ಪೂರೈಕೆಯೂ ಸರಿಯಾಗಿಲ್ಲ. ಬಸ್‌ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿರುವುದರಿಂದ ಪ್ರಯಾಣಿಕರು ಪ್ರಯಾಸ ಪಡುವಂತಾಗಿದೆ. ರಾತ್ರಿ ಈ ಬಸ್‌ ನಿಲ್ದಾಣ ಬಹಿರ್ದೆಸೆಯ ತಾಣವಾಗಿ ಬಳಕೆ ಆಗುವುದರಿಂದ ದುರ್ನಾತ ಹೆಚ್ಚಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry