7

ಪತ್ನಿ, ಮಗಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಟೆಕಿ

Published:
Updated:
ಪತ್ನಿ, ಮಗಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಟೆಕಿ

ಮೈಸೂರು: ಮೈಸೂರಿನ ವಿಜಯನಗರದ ನಾಲ್ಕನೇ ಹಂತದ ನಿವಾಸಿ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಪ್ರಜ್ವಲ್‌ (45) ಎಂಬಾತ ಪತ್ನಿ ಹಾಗೂ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪತ್ನಿ ಸವಿತಾ (39) ಮತ್ತು ಮಗಳು ಸಿಂಚನಾ (11) ಮೃತಪಟ್ಟವರು.  ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪ್ರಜ್ವಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಂಜನಗೂಡಿನ ಪ್ರಜ್ವಲ್‌ ಮತ್ತು ಕೆ.ಆರ್‌.ಪೇಟೆಯ ಸವಿತಾ ಮೈಸೂರಿನಲ್ಲಿ ವಾಸವಾಗಿದ್ದರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ದಂಪತಿ ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು. ಪ್ರಜ್ವಲ್‌ ಸ್ವಂತ ವ್ಯವಹಾರ ಮಾಡಲು ಮುಂದಾಗಿದ್ದ.

ಪತಿ ಮತ್ತು ಮಗಳನ್ನು ಎರಡು ದಿನಗಳ ಹಿಂದೆ ಕೊಲೆಗೈದು, ಗುರುವಾರ ರಾತ್ರಿ ಮನೆಯವರಿಗೆ ಕರೆ ಮಾಡಿ ತನ್ನ ಕೃತ್ಯವನ್ನು ತಿಳಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry