ಪಕ್ಷದ ಹಣಕಾಸಿನ ಸ್ಥಿತಿ ಸುಧಾರಿಸಲು ಆನ್‌ಲೈನ್‌ ದೇಣಿಗೆಗೆ ಮೊರೆಹೋದ ಕಾಂಗ್ರೆಸ್

7

ಪಕ್ಷದ ಹಣಕಾಸಿನ ಸ್ಥಿತಿ ಸುಧಾರಿಸಲು ಆನ್‌ಲೈನ್‌ ದೇಣಿಗೆಗೆ ಮೊರೆಹೋದ ಕಾಂಗ್ರೆಸ್

Published:
Updated:
ಪಕ್ಷದ ಹಣಕಾಸಿನ ಸ್ಥಿತಿ ಸುಧಾರಿಸಲು ಆನ್‌ಲೈನ್‌ ದೇಣಿಗೆಗೆ ಮೊರೆಹೋದ ಕಾಂಗ್ರೆಸ್

ನವದೆಹಲಿ: ಕಾಂಗ್ರೆಸ್‌ನ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಪಕ್ಷದ ಮುಖಂಡ ಶಶಿ ತರೂರ್‌ ತೋರಿದ ದೇಣಿಗೆ ಸಂಗ್ರಹಿಸುವ ಮಾರ್ಗವನ್ನು ಪಕ್ಷ ಅನುಸರಿಸಿದೆ.

ಶಶಿ ತರೂರ್‌ ಬುಧವಾರ ನೀಡಿದ ಹೇಳಿಕೆ ತರುವಾಯ ಜನರಿಂದ ಆನ್‌ಲೈನ್‌ ಮೂಲಕ ದೇಣಿಗೆ ಸಂಗ್ರಹಿಸಲು(ಕ್ರೌಡ್‌ ಫಂಡಿಂಗ್‌) ಮುಂದಾಗಿದೆ. ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ, ‘ಕಾಂಗ್ರೆಸ್‌ಗೆ ನಿಮ್ಮ ಬೆಂಬಲ ಮತ್ತು ಸಹಾಯ ಬೇಕಿದೆ. 70 ವರ್ಷಗಳಿಂದ ಹೆಮ್ಮೆಯಿಂದ ವಿಕಸನವಾಗುತ್ತ ಬಂದಿರುವ ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ದೇಣಿಗೆ ನೀಡುವ ಮೂಲಕ ಸಹಕರಿಸಿ’ ಎಂದು ಕರೆ ನೀಡಲಾಗಿದೆ. ಅದರೊಂದಿಗೆ ಆನ್‌ಲೈನ್‌ ಮೂಲಕ ದೇಣಿಗೆ ನೀಡುವ ಲಿಂಕ್‌ ಸಹ ಲಗತ್ತಿಸಲಾಗಿದೆ.

ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್‌ ಪಕ್ಷದ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂಬ ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ, ‘ಬಿಜೆಪಿ ಖಜಾನೆಯನ್ನು ಎದುರಿಸಲು ಪಕ್ಷದ ಮೇಲೆ ಕಾಳಜಿ ಇರುವ ಜನರ ಸಹಾಯ ಪಡೆಯಬೇಕಿದೆ’ ಎಂದು ಶಶಿ ತರೂರ್‌ ಇತ್ತೀಚೆಗೆ ಟ್ವೀಟ್‌ ಮಾಡಿದ್ದರು.

ಕಾಂಗ್ರೆಸ್‌ಗೆ ಕಾರ್ಪೊರೇಟ್‌ ವಲಯದಿಂದ ಬರುವ ದೇಣಿಗೆ ಕಡಿಮೆ ಆಗುತ್ತಿದೆ. ಕೇಂದ್ರದಲ್ಲಿ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‌ ಹಲವಾರು ವಿಧಾನಸಭಾ ಚುನಾವಣೆಗಳಲ್ಲಿ ಸೋತಿದೆ. 13 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಇಂದು ಪಂಜಾಬ್‌, ಮಿಜೊರಾಂ ಮತ್ತು ಕರ್ನಾಟಕದಲ್ಲಿ ಮಾತ್ರ ಆಡಳಿತದಲ್ಲಿದೆ ಎಂದು ಆ ಮಾಧ್ಯಮ ವರದಿಯಲ್ಲಿದೆ. 

ಅಸೊಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ 2016–17 ಸಾಲಿನಲ್ಲಿ ಕಾಂಗ್ರೆಸ್‌ ₹ 225.36 ಕೋಟಿ ಪಕ್ಷನಿಧಿ ಹೊಂದಿತ್ತು. ₹ 1,034 ಕೋಟಿ ಹೊಂದಿರುವ ಬಿಜೆಪಿ ದೇಶದ ಶ್ರೀಮಂತ ಪಕ್ಷವೆಂಬ ಪಟ್ಟ ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry