4

ಈ ಪರೀಕ್ಷೆ ಏಕೆ ಮಾಡಿಕೊಳ್ಳಬೇಕು?

Published:
Updated:
ಈ ಪರೀಕ್ಷೆ ಏಕೆ ಮಾಡಿಕೊಳ್ಳಬೇಕು?

ಕಳೆದ ಸಂಚಿಕೆಯಿಂದ...

* ಒಂದೇ ಸಾಧನದಲ್ಲಿ ಎರಡು ಪರೀಕ್ಷೆ ಏಕೆ ಮಾಡಬೇಕು?


ಸಮಯದೊಂದಿಗೆ ವೀರ್ಯದ ಚಲನವಲನವೂ ಬದಲಾಗುತ್ತದೆ. ಆದ್ದರಿಂದ ಎರಡು ರೀತಿಯ ಪರೀಕ್ಷೆ ಇದರಲ್ಲಿ ಲಭ್ಯ. ಎರಡನೇ ಪರೀಕ್ಷೆಯು ವೀರ್ಯದ ಗುಣಮಟ್ಟದ ಮೇಲೆ ನಿಗಾ ಇಡಲು ಅನುಕೂಲಕಾರಿ. ಜೀವನಶೈಲಿಯ ಬದಲಾವಣೆಯಿಂದ ಅಥವಾ ಇನ್ನಿತರ ಶಸ್ತ್ರಚಿಕಿತ್ಸೆಯ ಪರಿಣಾಮ ವೀರ್ಯದ ಮೇಲಾಗಿದ್ದರೆ ಅದನ್ನು ಕಂಡುಕೊಳ್ಳಲು, ಹಾಗೆಯೇ ಸುಧಾರಿಸಿಕೊಳ್ಳಲು ನೆರವಾಗುತ್ತದೆ.

*ವೀರ್ಯಪರೀಕ್ಷೆಯು ಸ್ಮಾರ್ಟ್‌ಫೋನ್‌ ಮುಖಾಂತರ ನಡೆಯುವುದರಿಂದ ಶುದ್ಧತೆಯ ವಿಷಯ ಎದುರಾಗುವುದಿಲ್ಲವೇ?

ವೀರ್ಯದ ಮಾದರಿಗೂ ಫೋನ್‍ಗೂ ನಡುವೆ ಯಾವುದೇ ನೇರ ಸಂಪರ್ಕ ಇರುವುದಿಲ್ಲ. ಅದಕ್ಕೆಂದೇ ‘ಯೊ’ ಕ್ಲಿಪ್‍ನಲ್ಲಿ ಪ್ಲಾಸ್ಟಿಕ್ ಸ್ಲೈಡ್ ಕವರ್ ನೀಡಲಾಗಿರುತ್ತದೆ. ಸ್ಯಾನಿಟೇಷನ್ ವೈಪ್ ಕೂಡ ಇರುವುದರಿಂದ ಶುದ್ಧತೆಯ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ.

* ನಿಮ್ಮ ಆಯ್ಕೆಯ ನಗರಗಳಾವುವು?

ಮೊದಲ ಹಾಗೂ ಎರಡನೇ ದರ್ಜೆಯ ನಗರವನ್ನು ಕೇಂದ್ರೀಕರಿಸಲಾಗಿದೆ. ಏಕೆಂದರೆ ಸಂತಾನಹೀನತೆ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿರುವುದೇ ನಗರ ಪ್ರದೇಶಗಳಲ್ಲಿ. ಜೀವನಶೈಲಿ, ಮಾಲಿನ್ಯ ಹಾಗೂ ಮಗುವನ್ನು ಪಡೆಯುವ ಸಮಯವನ್ನು ಮುಂದೂಡುವುದೂ ಹೆಚ್ಚಾಗಿ ನಗರ ಪ್ರದೇಶಗಳಲ್ಲೇ. ಆದ್ದರಿಂದ ಸದ್ಯಕ್ಕೆ ಪ್ರಮುಖ ನಗರಗಳತ್ತ ನಮ್ಮ ಗಮನ.

* ಮಗುವನ್ನು ಪಡೆಯಲು ಬಯಸುವ ಪುರುಷರಿಗೆ ಈ ಸಾಧನ ಯಾವ ರೀತಿ ನೆರವಾಗುತ್ತದೆ?

ಸಂತಾನಹೀನತೆ ಸಮಸ್ಯೆಯಲ್ಲಿ ಶೇ 50ರಷ್ಟು ಪುರುಷರ ಪಾಲೂ ಇರುವುದರಿಂದ ಸಮಸ್ಯೆ ಕಂಡುಕೊಳ್ಳುವುದು ಬಹುಮುಖ್ಯ. ಈ ಪರೀಕ್ಷೆಯನ್ನು ಖಾಸಗಿಯಾಗಿ ಮಾಡಿಕೊಳ್ಳಲು ಸಾಧ್ಯವಿರುವುದೂ ಮುಖ್ಯ ಅಂಶ. ವೀರ್ಯಸಂಬಂಧಿ ಸಮಸ್ಯೆಗಳನ್ನು ಬಹುಬೇಗ ಕಂಡುಕೊಳ್ಳುವ, ಹಾಗೆಯೇ ಶೀಘ್ರವಾಗಿ ಚಿಕಿತ್ಸೆ ಪಡೆಯಲು ನೆರವಾಗುತ್ತದೆ. ನಿಖರ ಫಲಿತಾಂಶ ನೀಡುವುದರಿಂದ ವಿಶ್ವಾಸಾರ್ಹವೂ ಆಗಿದೆ. ಖಾಸಗಿಯಾಗಿ ಪರೀಕ್ಷೆ ಮಾಡಿ

ಕೊಳ್ಳುವುದರೊಂದಿಗೆ ಅನವಶ್ಯಕ ಸಮಯ, ಹಣ ವ್ಯರ್ಥವಾಗುವುದೂ ತಡೆಯುತ್ತದೆ.

‘ಯೊ’ ಸಾಧನದ ಮಾರುಕಟ್ಟೆ ವಿಭಾಗದ ವಿಶ್ಲೇಷಣೆಯಲ್ಲಿ ಕಂಡುಬಂದ ಅಂಶಗಳು

‘ಯೊ’ ಸಾಧನದಲ್ಲಿ ಈ ಮೊದಲು ಒಟ್ಟಾರೆಯಾಗಿ 1528 ಮಾದರಿಗಳನ್ನು ಪರೀಕ್ಷಿಸಲಾಗಿದೆ. ದೆಹಲಿಯಲ್ಲಿ ಪ್ರತಿಶತ 17 ಜನರು ಸ್ಪಂದಿಸಿದ್ದರೆ, ಚೆನ್ನೈನಲ್ಲಿ 15, ಬೆಂಗಳೂರಿನಲ್ಲಿ 12, ಹೈದರಾಬಾದ್‍ನಲ್ಲಿ 13, ಮುಂಬೈನಲ್ಲಿ 18, ಕೋಲ್ಕತ್ತದಲ್ಲಿ 14, ಪುಣೆಯಲ್ಲಿ 12 ಮಂದಿ ಈ ಪರೀಕ್ಷೆಗೆ ಪ್ರತಿಕ್ರಿಯಿಸಿದ್ದಾರೆ.

21-25 ವರ್ಷ – ಶೇ 12,  26-30 ವರ್ಷ- ಶೇ 33, 31-35 ವರ್ಷ - ಶೇ 27, 36-40ವರ್ಷ - ಶೇ 20, 41-45  ಶೇ ವರ್ಷ-7ರಷ್ಟು ಬಳಕೆದಾರರು ಇದ್ದಾರೆ. ಇದರಲ್ಲಿ ವಿವಾಹಿತರು ಶೇ 61ರಷ್ಟಿದ್ದರೆ, ಅವಿವಾಹಿತರಲ್ಲಿ ಈ ಪ್ರಮಾಣ ಶೇ 32ರಷ್ಟಿದೆ; ವಿಚ್ಛೇದಿತ ಪುರುಷರ ಪ್ರಮಾಣ ಶೇ 6ರಷ್ಟಿದೆ.

* ಗರ್ಭಧಾರಣೆಯಲ್ಲಿ ವೀರ್ಯದ ಪಾತ್ರ, ಅದರ ಪ್ರಕ್ರಿಯೆ ಕುರಿತು ಜನರಲ್ಲಿ ಇನ್ನೂ ಜಾಗೃತಿ ಕಡಿಮೆ ಎಂಬ ಅಂಶವು ತಿಳಿದುಬಂದಿದೆ. ಮಾದರಿ ಪರೀಕ್ಷಿಸಿದ  ಶೇ 37ರಷ್ಟು ಮಂದಿಗೆ, ಈ ಪ್ರಕ್ರಿಯೆ ಕುರಿತು ಯಾವುದೇ ಮಾಹಿತಿ ಇಲ್ಲ.

* ಮಗುವನ್ನು ಪಡೆಯಲು ಬಯಸುವವರು ಸಮಸ್ಯೆ ಕುರಿತು ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲೂ ಹಿಂದೇಟಾಕುತ್ತಾರೆ. ತುಂಬಾ ಕಡಿಮೆ ಪ್ರಮಾಣ ಮಂದಿ ಈ ಕುರಿತು ಪರೀಕ್ಷೆಗೆ ಮುಂದಾಗುತ್ತಾರೆ.

* ಗರ್ಭಧಾರಣೆ ಮೇಲೆ ಹೇಗೆ ವೀರ್ಯದ ಗುಣಮಟ್ಟ ಅಥವಾ ಆರೋಗ್ಯವು ಪರಿಣಾಮ ಬೀರುತ್ತದೆ ಎಂಬುದರ ಕುರಿತು ಕೇವಲ ಶೇ 56ರಷ್ಟು ಮಂದಿಗೆ ಮಾತ್ರ ತಿಳಿವಳಿಕೆಯಿದೆ.

* ಐದರಲ್ಲಿ ಇಬ್ಬರು ಸಮಸ್ಯೆಗೆ ಸಂಬಂಧಿಸಿದಂತೆ ವೀರ್ಯ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಾರೆ.

* ಇನ್ನೊಬ್ಬರ ಅನುಭವ ಹಾಗೂ ಸಾಮಾಜಿಕ ಜಾಲತಾಣಗಳು ಈ ವಿಷಯದ ಕುರಿತು ತಿಳಿವಳಿಕೆ ಪಡೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

* ಯಾವುದೇ ಸಾಧನದ ನಿಖರತೆ ಆ ಸಾಧನವನ್ನು ಆಯ್ಕೆ ಮಾಡಲು ಪ್ರಮುಖ ಅಂಶವಾಗಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry