ವಿಶ್ವ ಭಾರತಿ ವಿ.ವಿ ವಿದ್ಯಾರ್ಥಿಗಳ ಕಲಿಕೆಗೆ ರೋಮಾಚಕ ಸ್ಥಳ: ಮೋದಿ

7

ವಿಶ್ವ ಭಾರತಿ ವಿ.ವಿ ವಿದ್ಯಾರ್ಥಿಗಳ ಕಲಿಕೆಗೆ ರೋಮಾಚಕ ಸ್ಥಳ: ಮೋದಿ

Published:
Updated:
ವಿಶ್ವ ಭಾರತಿ ವಿ.ವಿ ವಿದ್ಯಾರ್ಥಿಗಳ ಕಲಿಕೆಗೆ ರೋಮಾಚಕ ಸ್ಥಳ: ಮೋದಿ

ಶಾಂತಿ ನಿಕೇತನ(ಪಶ್ಚಿಮ ಬಂಗಾಳ)ಶಿಕ್ಷಣ ಪದವಿ ಪಡೆದ ಎಲ್ಲರಿಗೂ ಅಭಿನಂದನೆಗಳು. ವಿಶ್ವ ಭಾರತಿ ವಿಶ್ವವಿದ್ಯಾಲಯ ಅದ್ಭುತ ಸಂಪ್ರದಾಯಗಳ ಒಂದು ಬಾಗವಾಗಿ ಅಧ್ಯಯನ ಮಾಡಲು ಮತ್ತು ವಿಶೇಷ ಅನುಭವನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶುಕ್ರವಾರ ಪಶ್ಚಿಮ ಬಂಗಾಳದಲ್ಲಿನ ಶಾಂತಿ ನಿಕೇತನದಲ್ಲಿರುವ ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಗುರುದೇವ್ ಟ್ಯಾಗೋರ್ ಅವರು ವಿಶ್ವ ಭಾರತಿ ವಿ.ವಿಯನ್ನು ಕಲಿಕೆಯ ಒಂದು ರೋಮಾಂಚಕ ಸ್ಥಳವೆಂದು ಭಾವಿಸಿದ್ದರು. ಅದು ಪ್ರಪಂಚದಾದ್ಯಂತದ ಜನರನ್ನು ಸೆಳೆಯುತ್ತದೆ. ಈ ದೃಷ್ಟಿಕೋನ 'ವಸುದೈವ ಕುಟುಂಬಕಂ'ನ ನಮ್ಮ ಸಂಸ್ಕೃತಿಯ ಅನುಸಾರವಾಗಿದೆ ಎಂದು ಬಣ್ಣಿಸಿದರು.

ದೇಶದಲ್ಲಿ ಶಿಕ್ಷಣ ಮತ್ತು ಯುವ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಎಲ್ಲಾ ಬಗೆಯ ಕ್ರಮ ಕೈಗೊಂಡಿದೆ. ಜತೆಗೆ, ಇದಕ್ಕೆ ಹೆಚ್ಚಿನ ಒತ್ತು ನೀಡಿರುವುದನ್ನು ಈ ವಿ.ವಿ ಎತ್ತಿ ತೋರಿದೆ ಎಂದ ಮೋದಿ, ವಿಶ್ವ ಭಾರತಿ ವಿವಿಯ ವಿದ್ಯಾರ್ಥಿಗಳ ಪ್ರೀತಿಯನ್ನು ನಾನು ಯಾವಾಗಲೂ ಆನಂದಿಸುತ್ತೇನೆ ಎಂದರು.

ಇದೇ ವೇಳೆ ಅವರು ಶಾಂತಿ ನಿಕೇತನದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಣ ಸಾಂಸ್ಕೃತಿಕ ಬಾಂಧವ್ಯದ ಪ್ರತೀಕವಾಗಿರುವ ಬಾಂಗ್ಲಾ ದೇಶ ಭವನವನ್ನು ಉದ್ಘಾಟಿಸಿದ್ದಾರೆ. ಬಾಂಗ್ಲಾ ದೇಶದ ಪ್ರಧಾನ ಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರು ಈ ಎರಡೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.

ಜಾರ್ಖಂಡದಲ್ಲಿ, ಪ್ರಧಾನ ಮಂತ್ರಿ ಭಾರತ ಸರಕಾರ ಮತ್ತು ಜಾರ್ಖಂಡ ಸರಕಾರದ ವಿವಿಧ ಕಾರ್ಯಕ್ರಮಗಳಿಗೆ ಸಿಂಧ್ರಿಯಲ್ಲಿ ಶಿಲಾನ್ಯಾಸ ಮಾಡುವರು.

ವಿ.ವಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳ ಸಂಭ್ರಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry