ರಮ್ಮಿ ಸರ್ಕಲ್‌ ಸ್ಪರ್ಧೆ: ₹ 20 ಲಕ್ಷ ಗೆದ್ದ ಕನ್ನಡಿಗ

7

ರಮ್ಮಿ ಸರ್ಕಲ್‌ ಸ್ಪರ್ಧೆ: ₹ 20 ಲಕ್ಷ ಗೆದ್ದ ಕನ್ನಡಿಗ

Published:
Updated:
ರಮ್ಮಿ ಸರ್ಕಲ್‌ ಸ್ಪರ್ಧೆ: ₹ 20 ಲಕ್ಷ ಗೆದ್ದ ಕನ್ನಡಿಗ

ರಮ್ಮಿ ಸರ್ಕಲ್ .ಕಾಮ್‌ ಈಚೆಗೆ ಆಯೋಜಿಸಿದ್ದ ಗ್ರ್ಯಾಂಡ್ ರಮ್ಮಿ ಚಾಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ರಾಜ್ಯದ ಮಾಂಡವ ಸುಬ್ರಹ್ಮಣ್ಣೇಶ್ವರ ರಾವ್ ವಿಜೇತರಾಗಿದ್ದು, ₹ 20 ಲಕ್ಷ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಗೋವಾದ ಲಲಿತ್ ಸ್ಪಾ ಆ್ಯಂಡ್ ರೆಸಾರ್ಟಿನಲ್ಲಿ ಮೇ 18, 19ರಂದು ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರಾವ್ ಅವರು ದೇಶದ ಎಲ್ಲೆಡೆಯಿಂದ ಬಂದಿದ್ದ 215 ರಮ್ಮಿ ಆಟಗಾರರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.

ರೋಚಕವಾಗಿದ್ದ ನಾಲ್ಕು ಸುತ್ತಿನ ಸ್ಪರ್ಧೆಗಳಲ್ಲಿ ರಾವ್ ಅವರಿಗೆ ಅಲಾ ವೆಂಕಟೇಶ್ವರಲು ಪೈಪೋಟಿ ನೀಡಿ 2ನೇ ಬಹುಮಾನ (₹10 ಲಕ್ಷ) ಹಾಗೂ ರವಿಬಾಬು ಕೋಟ್ಲ ತೃತೀಯ

ಬಹುಮಾನ (₹5 ಲಕ್ಷ) ಪಡೆದರು.

ರಮ್ಮಿ ಸರ್ಕಲ್ .ಕಾಮ್‌ ವೆಬ್‍ಸೈಟ್‍ನಲ್ಲಿ ಆಟ ಆಡಲು ಅವಕಾಶ ಕಲ್ಪಿಸಲಾಗಿತ್ತು. ವೆಬ್‍ಸೈಟ್ ಅಥವಾ ಆ್ಯಪ್‍ನಲ್ಲಿ ರಮ್ಮಿ ಆಡಿದವರು ಗಳಿಸಿದ ಅಂಕಗಳನ್ನು ಸಾಫ್ಟ್‌ವೇರ್ ಮೂಲಕ ಸರಿಯಾಗಿ ನಿರ್ವಹಣೆ ಮಾಡಲಾಗಿತ್ತು.

ರಮ್ಮಿ ಸರ್ಕಲ್ .ಕಾಮ್‌ನ ಸಿಇಒ ಹಾಗೂ ಸಹ ಸಂಸ್ಥಾಪಕ ಭವಿನ್ ಪಾಂಡ್ಯ, ‘ರಮ್ಮಿ ಆಡುವವರಿಗೆ ಮನರಂಜನೆ ಮತ್ತು ಹೊಸ ರೀತಿಯ ಅನುಭವ ನೀಡುವ ಸಲುವಾಗಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಪ್ರತಿ ಆಟಗಾರನಿಗೂ ವಿಶೇಷ ಅನುಭವ ದೊರಕಿಸಿಕೊಡಬೇಕು ಎಂಬದು ನಮ್ಮ ಧ್ಯೇಯ’ ಎಂದು ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry