ವಂಡರ್‌ ವುಮನ್‌ ಆಗಿ ದೀಪಿಕಾ ಪಡುಕೋಣೆ

7

ವಂಡರ್‌ ವುಮನ್‌ ಆಗಿ ದೀಪಿಕಾ ಪಡುಕೋಣೆ

Published:
Updated:
ವಂಡರ್‌ ವುಮನ್‌ ಆಗಿ ದೀಪಿಕಾ ಪಡುಕೋಣೆ

ಗ್ಯಾಲ್‌ ಗಡೋಟ್‌ ಮುಖ್ಯಪಾತ್ರದಲ್ಲಿ ಮಿಂಚಿದ್ದ ‘ವಂಡರ್‌ ವುಮನ್‌’ ಕಳೆದ ವರ್ಷ ವಿಶ್ವದೆಲ್ಲೆಡೆ ಭಾರಿ ಹಿಟ್‌ ಗಳಿಸಿತ್ತು. ಈ ಚಿತ್ರದ ಮುಂದಿನ ಭಾಗ (ಸೀಕ್ವೆಲ್‌) ನಿರ್ಮಾಣ ಹಂತದಲ್ಲಿದೆ. ಇದೇ ಸಮಯದಲ್ಲಿ ಈ ಚಿತ್ರದಿಂದ ಪ್ರೇರಣೆ ಪಡೆದು ಬಾಲಿವುಡ್‌ನಲ್ಲೂ ಡಿಟೆಕ್ಟಿವ್‌ ಕಾಮಿಕ್‌ ಮಹಿಳಾ ಸೂಪರ್‌ ಹೀರೋ ಚಿತ್ರವೊಂದು ತಯಾರಾಗಲಿದೆ.

ವರದಿಗಳ ಪ್ರಕಾರ, ಇದೇ ಮೊದಲ ಬಾರಿಗೆ ಭಾರತೀಯ ಭಾಷೆಗಳಲ್ಲಿ ಮೊದಲ ಮಹಿಳಾ ಸೂಪರ್‌ ಹೀರೋ ಕುರಿತ ಚಿತ್ರ ತಯಾರಾಗುತ್ತಿದ್ದು, ಚಿತ್ರ ಮಾತುಕತೆ ಹಂತದಲ್ಲಿದೆ. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ವಿಶೇಷ. ಈ ಚಿತ್ರದ ಬಗ್ಗೆ ಸುದ್ದಿಗಳನ್ನು ರಹಸ್ಯವಾಗಿಡಲಾಗಿದ್ದು, ದೀಪಿಕಾ ಜೊತೆ ನಡೆಸಿದ ಮಾತುಕತೆಯನ್ನು ಸಹ ಗುಪ್ತವಾಗಿಡಲಾಗಿದೆ. ಚಿತ್ರವು ಸ್ಕ್ರಿಪ್ಟ್‌ ಹಂತದಲ್ಲಿದ್ದು, 2019ರ ವೇಳೆಗೆ ಈ ಚಿತ್ರ ಆರಂಭವಾಗಬಹುದು ಎನ್ನಲಾಗಿದೆ.

ಈ ಚಿತ್ರದ ಬಜೆಟ್‌ ಬಗ್ಗೆ ನಾನಾ ಗಾಳಿಸುದ್ದಿಗಳು ಹಬ್ಬಿದ್ದು, ಸುಮಾರು ₹300 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆನ್ನಲಾಗಿದೆ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry