ಸೂಪರ್‌ಸ್ಟಾರ್‌ಗೆ ಜೋಡಿಯಾಗಿ ಸಿಮ್ರನ್‌?

7

ಸೂಪರ್‌ಸ್ಟಾರ್‌ಗೆ ಜೋಡಿಯಾಗಿ ಸಿಮ್ರನ್‌?

Published:
Updated:
ಸೂಪರ್‌ಸ್ಟಾರ್‌ಗೆ ಜೋಡಿಯಾಗಿ ಸಿಮ್ರನ್‌?

ಸೂಪರ್‌ಸ್ಟಾರ್‌ ರಜನಿಕಾಂತ್‌ ನಾಯಕನಟನಾಗಿ ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದಲ್ಲಿ ತಮಿಳು ಚಿತ್ರವೊಂದು ಸಿದ್ಧವಾಗುತ್ತಿದೆ. ಎಂಬುದು ಚಿತ್ರಕ್ಕೆ ಇನ್ನೂ ಶೀರ್ಷಿಕೆ ನಿಗದಿಯಾಗಿಲ್ಲ. ಚಿತ್ರದಲ್ಲಿ ನಾಯಕನಟಿಯಾಗಿ ಸಿಮ್ರನ್‌  ಬಣ್ಣಹಚ್ಚಲಿದ್ದಾರೆ. ಮೊದಲಿಗೆ ತ್ರಿಷಾ ಅಥವಾ ಮೀನಾ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲೇ ಸಮಾರು ಐದು ವರ್ಷ ಅಗ್ರ ನಟಿಯಾಗಿ ಮೆರೆದ ಸಿಮ್ರನ್‌ ಇದೇ ಮೊದಲ ಬಾರಿಗೆ ರಜನಿಕಾಂತ್‌ಗೆ ಜೋಡಿಯಾಗಲಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ, ಸನ್‌ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ವಿಜಯ್ ಸೇತುಪತಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ಅನಿರುಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಮತ್ತೊಂದೆಡೆ ರಜನಿ ನಟನೆಯ ‘ಕಾಲಾ’ ಚಿತ್ರ ಜೂನ್‌ 7ಕ್ಕೆ ತೆರೆಕಾಣಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry