ಐಪಿಎಲ್‌ 2018: ಕೊನೆಯಲ್ಲಿ ಅಬ್ಬರಿಸಿದ ರಶೀದ್‌ ಖಾನ್‌, ಕೆಕೆಆರ್‌ ಗೆಲುವಿಗೆ 175ರನ್‌ ಗುರಿ

7

ಐಪಿಎಲ್‌ 2018: ಕೊನೆಯಲ್ಲಿ ಅಬ್ಬರಿಸಿದ ರಶೀದ್‌ ಖಾನ್‌, ಕೆಕೆಆರ್‌ ಗೆಲುವಿಗೆ 175ರನ್‌ ಗುರಿ

Published:
Updated:
ಐಪಿಎಲ್‌ 2018: ಕೊನೆಯಲ್ಲಿ ಅಬ್ಬರಿಸಿದ ರಶೀದ್‌ ಖಾನ್‌, ಕೆಕೆಆರ್‌ ಗೆಲುವಿಗೆ 175ರನ್‌ ಗುರಿ

ಕೋಲ್ಕತ್ತ: ನಗರದ ಈಡನ್ ಗಾರ್ಡನ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಆತಿಥೇಯ ಕೊಲ್ಕತ್ತ ನೈಟ್‌ರೈಡರ್ಸ್‌ ತಂಡಕ್ಕೆ 175ರನ್‌ಗಳ ಸವಾಲಿನ ಗುರಿ ನೀಡಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಕೆಕೆಆರ್‌ ತಂಡಕ್ಕೆ ಆರಂಭದಲ್ಲಿ ಯಶಸ್ಸು ಸಿಗಲಿಲ್ಲ. ಸನ್‌ರೈಸರ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ಸ್ಥಳೀಯ ಆಟಗಾರ ವೃದ್ಧಿಮಾನ್ ಸಹಾ(35) ಹಾಗೂ ಶಿಖರ್‌ ಧವನ್‌ ಮೊದಲ ವಿಕೆಟ್‌ಗೆ 7.1 ಓವರ್‌ಗಳಲ್ಲಿ 56ರನ್‌ ಕಲೆ ಹಾಕಿದರು.

ಬೃಹತ್‌ ಮೊತ್ತದ ಸೂಚನೆ ನೀಡಿದ್ದ ಈ ಜೋಡಿಯನ್ನು ಚೈನಾಮನ್‌ ಶೈಲಿಯ ಬೌಲರ್‌ ಕುಲದೀಪ್‌ ಯಾದವ್‌ ಬೇರ್ಪಡಿಸಿದರು. 34ರನ್‌ ಗಳಿಸಿ ಬಿರುಸಿನ ಆಟವಾಡುತ್ತಿದ್ದ ಧವನ್‌ರನ್ನು 8ನೇ ಓವರ್‌ನಲ್ಲಿ ಎಲ್‌ಬಿ ಬಲೆಗೆ ಕೆಡವಿದ ಯಾದವ್‌, ಅದೇ ಓವರ್‌ನಲ್ಲಿ ನಾಯಕ ಕೇನ್ ವಿಲಿಯಮ್ಸನ್ ವಿಕೆಟ್‌ ಉರುಳಿಸಿದರು.

ಪಂದ್ಯಾವಳಿಯಲ್ಲಿ ಅತಿಹೆಚ್ಚು ರನ್‌ಗಳಿಸಿರುವ ವಿಲಿಯಮ್ಸನ್‌ ಈ ಪಂದ್ಯದಲ್ಲಿ ಗಳಿಸಿದ್ದು ಕೇವಲ 3ರನ್‌.

ಕೊನೆ ಕ್ಷಣದಲ್ಲಿ ಅಬ್ಬರಿಸಿದ ರಶೀದ್‌ ಖಾನ್‌ ಕೇವಲ 10 ಎಸೆತಗಳಲ್ಲಿ 4 ಸಿಕ್ಸರ್‌ 2 ಬೌಂಡರಿ ಸಹಿತ 34 ರನ್‌ ಗಳಿಸಿ ತಂಡದ ಮೊತ್ತ 170ರ ಗಡಿ ದಾಟಲು ನೆರವಾದರು.

ಕೆಕೆಆರ್‌ ಪರ ಕುಲದೀಪ್‌ ಯಾದವ್‌ 2 ವಿಕೆಟ್‌ ಪಡೆದರೆ, ಸುನಿಲ್ ನಾರಾಯಣ್, ಪಿಯೂಷ್ ಚಾವ್ಲಾ, ಶಿವಂ ಮಾವಿ ತಲಾ ಒಂದು ವಿಕೆಟ್‌ ಪಡೆದರು. 4 ಓವರ್‌ಗಳಲ್ಲಿ 56ರನ್‌ ಬಿಟ್ಟುಕೊಟ್ಟ ಪ್ರಸಿದ್ಧ ಕೃಷ್ಣ ಮಹತ್ವದ ಪಂದ್ಯದಲ್ಲಿ ದುಬಾರಿಯಾದರು.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಕೆಕೆಆರ್‌ ತಂಡ 1 ಓವರ್‌ ಮುಕ್ತಾಯಕ್ಕೆ ವಿಕೆಟ್‌ ನಷ್ಟವಿಲ್ಲದೆ 6ರನ್‌ ಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry