10 ಅಂಶಗಳಿರಲಿ

7

10 ಅಂಶಗಳಿರಲಿ

Published:
Updated:

ಎಚ್‌.ಡಿ. ಕುಮಾರಸ್ವಾಮಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಪಡಿಸಿದ್ದಾರೆ. ಅವರ ನೇತೃತ್ವದ ಸರ್ಕಾರವು ರಾಜ್ಯದ ಜನರ ದೃಷ್ಟಿಯಿಂದ ಅತಿ ಅಗತ್ಯವೆನಿಸುವ ಹತ್ತು ಅಂಶಗಳಿಗೆ ಆದ್ಯತೆ ನೀಡಿದಲ್ಲಿ ನಾಡಿನ ಅಭಿವೃದ್ಧಿ ಸಾಧ್ಯವಾಗುವುದಲ್ಲದೆ, ಸಮ್ಮಿಶ್ರ ಸರ್ಕಾರವು ಮಾದರಿ ಸರ್ಕಾರವೂ ಆಗಬಹುದು. ಆ ಹತ್ತು ಅಂಶಗಳೆಂದರೆ:

1. ಭ್ರಷ್ಟಾಚಾರವನ್ನು ಸಂಪೂರ್ಣ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. 2. ಬಡ ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. 3. ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡುವಂತಾಗಬೇಕು. 4. ಪ್ರತಿ ತಾಲ್ಲೂಕಿನಲ್ಲಿ ಎಲ್ಲಾ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ವಸತಿನಿಲಯ ಕಲ್ಪಿಸಬೇಕು. 5. ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಯೋಗ್ಯ ಬೆಲೆ ಸಿಗಬೇಕು. 6. ರಾಜ್ಯದ ಎಲ್ಲರಿಗೂ ಕುಡಿಯಲು ಶುದ್ಧವಾದ ನೀರು ಲಭ್ಯವಾಗಬೇಕು. 7. ಕುಟುಂಬದಲ್ಲಿ ಒಬ್ಬನಿಗೆ ಸರ್ಕಾರಿ ಉದ್ಯೋಗ ಲಭಿಸಬೇಕು. 8. ಪ್ರತಿ ಹಳ್ಳಿಯಲ್ಲಿಯೂ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಆಗಬೇಕು. 9. ನಿವೃತ್ತಿ ವಯಸ್ಸು ಏರಿಕೆ ಮಾಡಬಾರದು. 10. ಅರ್ಹತೆಗೆ ಅನುಗುಣವಾಗಿ ಯುವಕರಿಗೆ ಉದ್ಯೋಗ ಸಿಗುವಂತಾಗಬೇಕು.

ಈ ಹತ್ತು ಅಂಶಗಳತ್ತ ಸರ್ಕಾರ ಗಮನ ಹರಿಸಿದಲ್ಲಿ ಗಾಂಧೀಜಿ ಕಂಡ ರಾಮರಾಜ್ಯದ ಕನಸಿನ ಹತ್ತಿರಕ್ಕಾದರೂ ಹೋಗಲು ಹೊಸ ಸರ್ಕಾರಕ್ಕೆ ಸಾಧ್ಯವಾಗಬಹುದು.

-ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry