ದಿವಾಳಿಯಾಗದಿರಲಿ!

7

ದಿವಾಳಿಯಾಗದಿರಲಿ!

Published:
Updated:

ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ಜೊತೆಗೆ ಎರಡು ಪ್ರಣಾಳಿಕೆಗಳನ್ನು ಜಾರಿಗೊಳಿಸಬೇಕಾದ ಅನಿವಾರ್ಯಕ್ಕೆ ಸರ್ಕಾರ ಸಿಲುಕಿದೆ.

ಕಾಂಗ್ರೆಸ್‌ ನೇತೃತ್ವದ ಹಿಂದಿನ ಸರ್ಕಾರದ ಅನೇಕ ಯೋಜನೆಗಳನ್ನು ಟೀಕಿಸಿದ್ದ ಕುಮಾರಸ್ವಾಮಿಯವರು, ಅವರದೇ ಬೆಂಬಲದಿಂದ ಸರ್ಕಾರ ರಚಿಸಿರುವುದರಿಂದ, ಹಿಂದಿನ ಸರ್ಕಾರದ ಯೋಜನೆಗಳನ್ನು ರದ್ದುಗೊಳಿಸುತ್ತಾರೆಯೇ? ಅಥವಾ ಅವುಗಳ ಜೊತೆಗೆ ಇನ್ನೂ ಹೊಸ ಯೋಜನೆಗಳನ್ನು ರೂಪಿಸುತ್ತಾರೋ?

ರೈತರ ಸಾಲಮನ್ನಾ ಜನಪ್ರಿಯ ಯೋಜನೆಯಾದರೂ ಅದರಿಂದ ಉಂಟಾಗುವ ಆರ್ಥಿಕ ಹೊರೆಯನ್ನು ನಿಭಾಯಿ

ಸುವ ವಿಧಾನವಾದರೂ ಹೇಗೆ? ಸರ್ಕಾರಿ ಉದ್ಯೋಗಿಗಳಿಗೆ ಆರನೇ ವೇತನ ಆಯೋಗದಲ್ಲಿ ಘೋಷಿಸಲಾದ ಸೌಲಭ್ಯಗಳನ್ನು ಇನ್ನೂ ನೀಡಿಲ್ಲ. ಈ ನಿಟ್ಟಿನಲ್ಲಿ ಹಣಕಾಸು ಇಲಾಖೆ ತನ್ನ ಅಸಹಾಯಕತೆಯನ್ನು ಸೂಚಿಸಿದೆ. ‘ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯ ಅಂಚಿಗೆ ದೂಡಿದೆ, ಖಜಾನೆ ಖಾಲಿಯಾಗಿದೆ’ ಎಂಬಿತ್ಯಾದಿಯಾಗಿ ದೂರಿದ್ದ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರ ಹಾಗೆ ಅಗ್ಗದ ಪ್ರಚಾರಕ್ಕಾಗಿ ಜನಪ್ರಿಯ ಯೋಜನೆಗಳಿಗೆ ಮಾತ್ರ ಒತ್ತು ಕೊಟ್ಟಲ್ಲಿ ರಾಜ್ಯ ದಿವಾಳಿಯಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗದಂತೆ ಎಚ್ಚರ ವಹಿಸಲಿ.

-ಮಂಜುನಾಥ ಸು.ಮ., ಚಿಂತಾಮಣಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry