ಪಾರದರ್ಶಕತೆ ಮುಖ್ಯ

7

ಪಾರದರ್ಶಕತೆ ಮುಖ್ಯ

Published:
Updated:

ಇವಿಎಂನ ವಿಶ್ವಾಸಾರ್ಹತೆ ಸಾಬೀತುಪಡಿಸಲು ವಹಿಸುವ ಮುತುವರ್ಜಿಯ ಜೊತೆಜೊತೆಗೆ ಅದರ ದುರ್ಬಳಕೆಗೆ ಇರುವ ಅವಕಾಶಗಳತ್ತ ಕೂಡ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಗಮನಹರಿಸುವುದು ಅಗತ್ಯ.

‘ಮತಯಂತ್ರವನ್ನು ಹ್ಯಾಕ್ ಮಾಡಬಹುದು, ಯಾವುದೇ ಬಟನ್ ಒತ್ತಿದರೂ ಒಂದೇ ಪಕ್ಷಕ್ಕೆ ಮತ ಚಲಾವಣೆಯಾಗುವಂತೆ ಮಾಡಬಹುದು’ ಅಂತೆಲ್ಲ ಹೇಳಿ ತಂತ್ರಜ್ಞಾನದ ಬಳಕೆ ಕುರಿತು ಕುರುಡು ವ್ಯಾಮೋಹ ಹೊಂದಿರುವ ಮಂದಿಯ ಅಪಹಾಸ್ಯಕ್ಕೆ ತುತ್ತಾಗುವ ಕೆಲ ರಾಜಕಾರಣಿಗಳ ಮಾತನ್ನು ಹೇಗೆ ಸ್ವೀಕರಿಸಬೇಕೆಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಆದರೆ, ಪ್ರತಿ ರಾಜಕೀಯ ಪಕ್ಷವೂ ತನ್ನದೇ ಒಳಿತಿಗಾಗಿ ಒಂದಿಷ್ಟು ಪೂರ್ವತಯಾರಿ ಮಾಡಿಕೊಳ್ಳಬೇಕಾದ ಅಗತ್ಯವಂತೂ ಇದ್ದೇ ಇದೆ.

ಮತಯಂತ್ರ ಕಾರ್ಯನಿರ್ವಹಣೆ ಕುರಿತು ಚುನಾವಣಾ ಸಿಬ್ಬಂದಿ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ್ತು ಎಲ್ಲ ಮತದಾರರಿಗೂ ಅರಿವು ನೀಡಲು ಸಾಧ್ಯವಿಲ್ಲವೆನ್ನುವುದಾದರೆ, ಮುಂದಿರುವ ಪರ್ಯಾಯಗಳ ಕುರಿತು ಮುಕ್ತ ಮನಸ್ಸಿನಿಂದ ಪರಾಮರ್ಶಿಸುವುದು ಒಳಿತಲ್ಲವೇ? ಮತಯಂತ್ರ ಬಳಸುತ್ತಿರುವುದರಿಂದ ಚುನಾವಣಾ ಪ್ರಕ್ರಿಯೆಗಳಿಗೆ ತೊಡಕುಂಟಾಗುತ್ತಿದ್ದರೆ, ಅದು ಕೂಡ ಗಂಭೀರ ವಿಚಾರವಲ್ಲವೇ?

ಮತಯಂತ್ರ ಎಲ್ಲ ರೀತಿಯ ಅಕ್ರಮಗಳಿಗೂ ಅನುವು ಮಾಡಿಕೊಡುತ್ತದೆ ಎಂಬ ವಾದ ಹೇಗೆ ಬಾಲಿಶವೋ ಹಾಗೆಯೇ ಮತಯಂತ್ರದ ಬಳಕೆಯಿಂದಷ್ಟೇ ಪಾರದರ್ಶಕವಾಗಿ ಚುನಾವಣೆ ನಡೆಸಲು ಸಾಧ್ಯವೆನ್ನುವುದು ಕೂಡ ಅಸಮಂಜಸವೇ ಸರಿ. ಮತಪತ್ರ ಅಥವಾ ಮತಯಂತ್ರ ಯಾವುದರ ಮೂಲಕವೇ ಚುನಾವಣೆ ನಡೆದರೂ, ಅಂತಿಮವಾಗಿ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಗೆ ಕನ್ನಡಿ ಹಿಡಿಯಬಹುದಾದುದು ಚುನಾವಣಾ ಸಿಬ್ಬಂದಿಯ ನಿಷ್ಪಕ್ಷಪಾತ ಧೋರಣೆ ಮಾತ್ರ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry