ಟಿಸಿಎಸ್‌: ದಾಖಲೆ ಮಾರುಕಟ್ಟೆ ಮೌಲ್ಯ

5

ಟಿಸಿಎಸ್‌: ದಾಖಲೆ ಮಾರುಕಟ್ಟೆ ಮೌಲ್ಯ

Published:
Updated:
ಟಿಸಿಎಸ್‌: ದಾಖಲೆ ಮಾರುಕಟ್ಟೆ ಮೌಲ್ಯ

ನವದೆಹಲಿ: ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ನ (ಟಿಸಿಎಸ್‌) ಷೇರು ಮಾರುಕಟ್ಟೆ ಮೌಲ್ಯವು ₹ 7 ಲಕ್ಷ ಕೋಟಿ ದಾಟಿದೆ.

ಈ ಮೈಲುಗಲ್ಲು ದಾಖಲಿಸಿದ ದೇಶದ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶುಕ್ರವಾರದ ವಹಿವಾಟಿನಲ್ಲಿ ಸಂಸ್ಥೆಯ ಷೇರು ಬೆಲೆ ಶೇ 1.91ರಷ್ಟು ಹೆಚ್ಚಾಗಿ ₹ 3,674ಕ್ಕೆ ತಲುಪಿತ್ತು.

ಈ ವರ್ಷದಲ್ಲಿ ಇದುವರೆಗೆ ಸಂಸ್ಥೆಯ ಷೇರು ಶೇ 35ರಷ್ಟು ಹೆಚ್ಚಳ ಕಂಡಿದೆ.

ಹಿಂದಿನ ತಿಂಗಳಿನಲ್ಲಿ ದಿನದ ವಹಿವಾಟನ್ನು ₹ 6.50 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯದೊಂದಿಗೆ ಕೊನೆಗೊಳಿಸಿದ ಮೊದಲ ಸಂಸ್ಥೆ ಎನ್ನುವ ದಾಖಲೆಗೂ ಟಿಸಿಎಸ್‌ ಪಾತ್ರವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry