ಗರ್ಭಪಾತ ಕಾಯ್ದೆ: ಶನಿವಾರ ಮತ ಎಣಿಕೆ

7

ಗರ್ಭಪಾತ ಕಾಯ್ದೆ: ಶನಿವಾರ ಮತ ಎಣಿಕೆ

Published:
Updated:
ಗರ್ಭಪಾತ ಕಾಯ್ದೆ: ಶನಿವಾರ ಮತ ಎಣಿಕೆ

ಡಬ್ಲಿನ್‌ (ಎಎಫ್‌ಪಿ): ಐರ್ಲೆಂಡ್‌ನಲ್ಲಿ ಗರ್ಭಪಾತ ನಿಷೇಧ ಕಾನೂನನ್ನು ಸಡಿಲಗೊಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲು ಶುಕ್ರವಾರ ಮತದಾನ ನಡೆಯಿತು. ಶನಿವಾರ ಮತ ಎಣಿಕೆ ನಡೆಯಲಿದೆ.

ಸಂವಿಧಾನ ಬದ್ಧವಾಗಿರುವ ಗರ್ಭಪಾತ ನಿಷೇಧ ಕಾನೂನು ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಚರ್ಚೆಗಳು ನಡೆದಿದ್ದವು. ಶುಕ್ರವಾರ ಸುಮಾರು 35 ಲಕ್ಷ ಮಂದಿ ಮತ ಚಲಾಯಿಸಿದ್ದಾರೆ.

ಕಾನೂನು ಉಲ್ಲಂಘಿಸಿ ಗರ್ಭಪಾತಕ್ಕೆ ಒಳಗಾಗುವವರು 14 ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಬೇಕಿದ್ದ ಕಾರಣ ಸಾವಿರಾರು ಮಹಿಳೆಯರು ಪಕ್ಕದ ಬ್ರಿಟನ್‌ಗೆ ತೆರಳುವ ಸ್ಥಿತಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry