ನಿಫಾ ಆತಂಕ: ಶೂಟಿಂಗ್‌ ಸ್ಥಳಾಂತರ

7

ನಿಫಾ ಆತಂಕ: ಶೂಟಿಂಗ್‌ ಸ್ಥಳಾಂತರ

Published:
Updated:
ನಿಫಾ ಆತಂಕ: ಶೂಟಿಂಗ್‌ ಸ್ಥಳಾಂತರ

ನವದೆಹಲಿ: ನಿಫಾ ವೈರಾಣು ಸೋಂಕಿನಿಂದ ತತ್ತರಿಸಿರುವ ಕೇರಳದಿಂದ ಕುಮಾರ್‌ ಸುರೇಂದ್ರ ಸಿಂಗ್ ಸ್ಮಾರಕ ಶೂಟಿಂಗ್ ಚಾಂಪಿಯನ್‌ಷಿಪ್ ಸ್ಥಳಾಂತರಿಸಲು ರಾಷ್ಟ್ರೀಯ ಶೂಟಿಂಗ್ ಫೆಡರೇಷನ್ ನಿರ್ಧರಿಸಿದೆ.

ರೈಫಲ್‌ ಮತ್ತು ಪಿಸ್ತೂಲ್ ವಿಭಾಗದ 18ನೇ ಚಾಂಪಿಯನ್‌ಷಿಪ್ ಕೇರಳ ರಾಜಧಾನಿ ತಿರುವನಂತಪುರದಲ್ಲಿ ಇದೇ ತಿಂಗಳ 31ರಿಂದ ಜೂನ್‌ 18 ವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಶುಕ್ರವಾರ ನಿರ್ಧಾರ ಬದಲಿಸಿರುವ ಫೆಡರೇಷನ್‌ ಜೂನ್‌ 10ರಿಂದ ದೆಹಲಿಯ ಡಾ.ಕರ್ಣಿಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ನಡೆಸಲು ಉದ್ದೇಶಿಸಿದೆ.

ಜೂನ್‌ ಏಳರಿಂದ 17ರ ವರೆಗೆ ಸೀನಿಯರ್, ಜೂನಿಯರ್ ಮತ್ತು ಯೂತ್ ವಿಭಾಗದ ರಾಷ್ಟ್ರೀಯ ಆಯ್ಕೆ ಶಿಬಿರ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry