ಹಾಕಿ: ರಾಷ್ಟ್ರೀಯ ಶಿಬಿರಕ್ಕೆ 48 ಮಂದಿ ಆಯ್ಕೆ

7
ಎಫ್‌ಐಎಚ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ

ಹಾಕಿ: ರಾಷ್ಟ್ರೀಯ ಶಿಬಿರಕ್ಕೆ 48 ಮಂದಿ ಆಯ್ಕೆ

Published:
Updated:
ಹಾಕಿ: ರಾಷ್ಟ್ರೀಯ ಶಿಬಿರಕ್ಕೆ 48 ಮಂದಿ ಆಯ್ಕೆ

ನವದೆಹಲಿ : ಹಾಕಿ ಇಂಡಿಯಾ (ಎಚ್‌ಐ), ಮೇ 28ರಿಂದ ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯುವ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಶುಕ್ರವಾರ 48 ಮಂದಿ ಆಟಗಾರರನ್ನು ಆಯ್ಕೆ ಮಾಡಿದೆ.

ನೆದರ್‌ಲ್ಯಾಂಡ್ಸ್‌ನ ಬ್ರೆಡಾದಲ್ಲಿ ನಡೆಯುವ ಎಫ್‌ಐಎಚ್‌ ಪುರುಷರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಬಿರಕ್ಕೆ ಆಯ್ಕೆಯಾಗಿರುವ ಆಟಗಾರರಿಗೆ ಮುಖ್ಯ ಕೋಚ್‌ ಹರೇಂದ್ರ ಸಿಂಗ್‌ ಅವರು ಒಟ್ಟು 21 ದಿನ ವಿಶೇಷ ತರಬೇತಿ ನೀಡಲಿದ್ದಾರೆ.

‘ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವುದು ನಮ್ಮ ಗುರಿ. ಈ ಟೂರ್ನಿಗೆ ಬಲಿಷ್ಠ ತಂಡ ಕಟ್ಟಲು ಮುಂದಾಗಿದ್ದು ಈ ಉದ್ದೇಶದಿಂದಲೇ ತರಬೇತಿ ಶಿಬಿರ ಆಯೋಜಿಸಿದ್ದೇವೆ’ ಎಂದು ಹರೇಂದ್ರ ಸಿಂಗ್ ತಿಳಿಸಿದ್ದಾರೆ.

ಕರ್ನಾಟಕದ ಎಸ್‌.ವಿ.ಸುನಿಲ್‌ ಮತ್ತು ಅನುಭವಿ ಆಟಗಾರ ಸರ್ದಾರ್‌ ಸಿಂಗ್‌ ಅವರೂ ಶಿಬಿರಕ್ಕೆ ಆಯ್ಕೆಯಾ‌ಗಿದ್ದಾರೆ.

ಶಿಬಿರಕ್ಕೆ ಆಯ್ಕೆಯಾದವರು

ಗೋಲ್‌ಕೀಪರ್ಸ್‌: ಪಿ.ಆರ್‌.ಶ್ರೀಜೇಶ್‌, ಸೂರಜ್‌ ಕರ್ಕೆರಾ, ಕೃಷ್ಣ ಬಹದ್ದೂರ್‌ ಪಾಠಕ್‌, ವಿಕಾಸ್‌ ದಹಿಯಾ, ಜಗದೀಪ್‌ ದಯಾಳ್‌ ಮತ್ತು ಪ್ರಶಾಂತ್‌ ಕುಮಾರ್‌ ಚೌಹಾಣ್‌.

ಡಿಫೆಂಡರ್ಸ್‌: ಹರ್ಮನ್‌ಪ್ರೀತ್‌ ಸಿಂಗ್‌, ರೂಪಿಂದರ್‌ ಪಾಲ್‌ ಸಿಂಗ್‌, ಗುರಿಂದರ್‌ ಸಿಂಗ್‌, ವರುಣ್‌ ಕುಮಾರ್‌, ಕೊಥಾಜಿತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಅಮಿತ್‌ ರೋಹಿದಾಸ್‌, ಬೀರೇಂದ್ರ ಲಾಕ್ರಾ, ನೀಲಮ್‌ ಸಂಜೀಪ್‌, ದಿಪ್ಸನ್‌ ಟರ್ಕಿ, ಗುರ್ಜಿಂದರ್‌ ಸಿಂಗ್‌, ಜರ್ಮನ್‌ಪ್ರೀತ್‌ ಸಿಂಗ್‌, ಅಮಿತ್‌ ಗೌಡ ಮತ್ತು ಆನಂದ್‌ ಲಾಕ್ರಾ.

ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್‌ ಸಿಂಗ್‌, ಚಿಂಗ್ಲೆನ್‌ಸನಾ ಸಿಂಗ್‌, ಸುಮಿತ್‌, ಸಿಮ್ರನ್‌ಜಿತ್‌ ಸಿಂಗ್‌, ನೀಲಕಂಠ ಶರ್ಮಾ, ಸರ್ದಾರ್‌ ಸಿಂಗ್‌, ಹಾರ್ದಿಕ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ರಾಜ್‌ಕುಮಾರ್‌ ಪಾಲ್‌, ಅಮನ್‌ ಮಿರಾಶ್‌ ಟರ್ಕಿ, ಧರ್ಮಿಂದರ್‌ ಸಿಂಗ್‌, ಮನ್‌ಪ್ರೀತ್‌ ಮತ್ತು ವಿವೇಕ್‌ ಸಾಗರ್‌ ಪ್ರಸಾದ್‌.

ಫಾರ್ವರ್ಡ್ಸ್‌: ಎಸ್‌.ವಿ.ಸುನಿಲ್‌, ಆಕಾಶ್‌ದೀಪ್‌ ಸಿಂಗ್‌, ಗುರ್ಜಂತ್‌ ಸಿಂಗ್‌, ಮನದೀಪ್‌ ಸಿಂಗ್‌, ರಮಣದೀಪ್‌ ಸಿಂಗ್‌, ದಿಲ್‌ಪ್ರೀತ್‌ ಸಿಂಗ್‌, ಸುಮಿತ್‌ ಕುಮಾರ್‌, ಮಹಮ್ಮದ್‌ ಉಮರ್‌, ಸುದೇವ್‌ ಬಿಳಿಮಗ್ಗ, ಮಹಮ್ಮದ್‌ ರಾಹೀಲ್‌ ಮೌಸೀನ್‌, ಅರ್ಮಾನ್‌ ಖುರೇಷಿ, ಸುಖಜೀತ್‌ ಸಿಂಗ್‌, ಗಗನ್‌ದೀಪ್‌ ಸಿಂಗ್‌ ಸೀನಿಯರ್‌, ಪ್ರದೀಪ್‌ ಸಿಂಗ್‌ ಮತ್ತು ಮಣಿಂದರ್‌ಜಿತ್‌ ಸಿಂಗ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry