ರೈತರ ಸಾಲ ಮನ್ನಾ ಮುಖ್ಯಮಂತ್ರಿ ವಾಗ್ದಾನ

7

ರೈತರ ಸಾಲ ಮನ್ನಾ ಮುಖ್ಯಮಂತ್ರಿ ವಾಗ್ದಾನ

Published:
Updated:
ರೈತರ ಸಾಲ ಮನ್ನಾ ಮುಖ್ಯಮಂತ್ರಿ ವಾಗ್ದಾನ

ಬೆಂಗಳೂರು: ರೈತರು ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ಗಳಲ್ಲಿ ಮಾಡಿರುವ ₹ 53,000 ಕೋಟಿ ಮೊತ್ತದ ಕೃಷಿ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ವಿಶ್ವಾಸಮತ ಯಾಚಿಸಿ ಮಾತನಾಡಿದ ಅವರು, ‘ಸಾಲ ಮನ್ನಾ ಮಾಡುವುದಿಲ್ಲ ಎಂದು ಹೇಳಿಲ್ಲ. ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬಂದಿದ್ದರೆ 24 ಗಂಟೆಗಳಲ್ಲೇ ಘೋಷಣೆ ಮಾಡುತ್ತಿದ್ದೆ. ಈಗ ಇರುವುದು ಸಮ್ಮಿಶ್ರ ಸರ್ಕಾರ. ಹೀಗಾಗಿ, ಏಕಾಂಗಿಯಾಗಿ ಘೋಷಣೆ ಮಾಡಲು ಆಗುವುದಿಲ್ಲ. ಕಾಂಗ್ರೆಸ್‌ ನಾಯಕರ ಜತೆಗೆ ಚರ್ಚಿಸಬೇಕಿದೆ’ ಎಂದರು.

‘ಸಾಲ ಮಾಡಿ ಕಾರ್ಯಕ್ರಮಗಳ ಅನುಷ್ಠಾನ ಮಾಡುವುದಿಲ್ಲ. ಕಾಂಗ್ರೆಸ್‌ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಹಾಗೂ ಆ ಪಕ್ಷದ ಪ್ರಣಾಳಿಕೆಯಲ್ಲಿನ ಉತ್ತಮ ವಿಷಯಗಳನ್ನು ಅನುಷ್ಠಾನಗೊಳಿಸುತ್ತೇನೆ’ ಎಂದರು.

ರಾಜ್ಯ ಬಂದ್‌: ಬಿಎಸ್‌ವೈ ಎಚ್ಚರಿಕೆ

‘ಜೆಡಿಎಸ್‌ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಸಂಜೆಯೊಳಗೆ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ ನಡೆಸುತ್ತೇವೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಎಚ್ಚರಿಸಿದರು.

 

ರಾಜಕೀಯ ಕಾರಣಕ್ಕೆ ಮಾಡುವ ಪ್ರತಿಭಟನೆಗಳಿಗೆ ಬೆದರುವುದಿಲ್ಲ. ಇಂತಹ ನೂರಾರು ಪ್ರತಿಭಟನೆಗಳನ್ನು ನೋಡಿದ್ದೇನೆ

-ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry