ಇಬ್ಬರೊಂದಿಗೆ ವಿವಾಹವಾಗಲಿರುವ ರೊನಾಲ್ಡಿನೊ

7

ಇಬ್ಬರೊಂದಿಗೆ ವಿವಾಹವಾಗಲಿರುವ ರೊನಾಲ್ಡಿನೊ

Published:
Updated:

ರಿಯೊ ಡಿ ಜನೈರೊ: ಬ್ರೆಜಿಲ್‌ನ ಹಿರಿಯ ಫುಟ್‌ಬಾಲ್ ಆಟಗಾರ ರೊನಾಲ್ಡಿನೊ ಅವರು ತಮ್ಮ ಇಬ್ಬರು ಪ್ರೇಯಸಿಯರಾದ ಪ್ರಿಸಿಲ್ಲಾ ಕೊಲ್ಹೊ ಮತ್ತು ಬಿಟ್ರಿಜ್ ಸೌಜಾ ಅವರ ಒಂದೇ ದಿನ ಮದುವೆಯಾಗಲಿದ್ದಾರೆ!

38 ವರ್ಷದ ರೊನಾಲ್ಡಿನೊ ಅವರು ಬಿಟ್ರಿಜ್ ಅವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಈಚೆಗೆ ಕೆಲವು ತಿಂಗಳುಗಳಿಂದ ಪ್ರಿಸಿಲ್ಲಾ ಅವರೊಂದಿಗೂ ಡೇಟಿಂಗ್ ಮಾಡುತ್ತಿದ್ದರು.

ಹೋದ ಡಿಸೆಂಬರ್‌ನಿಂದ ರೊನಾಲ್ಡಿನೊ ಅವರು ಇಬ್ಬರೂ ಪ್ರಿಯತಮೆಯರೊಂದಿಗೆ ಒಂದೇ ಮನೆಯಲ್ಲಿದ್ದಾರೆ. ಅವರಿಬ್ಬರೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾರೆ. ಮುಂದಿನ ಆಗಸ್ಟ್‌ನಲ್ಲಿ ಮದುವೆ ನಡೆಯಲಿದೆಯೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry