ಚಿನ್ನ ಗೆಲ್ಲುವ ಗುರಿ: ಕಮವೊರೊರ್‌

7

ಚಿನ್ನ ಗೆಲ್ಲುವ ಗುರಿ: ಕಮವೊರೊರ್‌

Published:
Updated:
ಚಿನ್ನ ಗೆಲ್ಲುವ ಗುರಿ: ಕಮವೊರೊರ್‌

ಬೆಂಗಳೂರು: ‘ಭಾನುವಾರ ನಡೆಯುವ ವಿಶ್ವ 10ಕೆ ಓಟದ ಸ್ಪರ್ಧೆಯಲ್ಲಿ ಚಿನ್ನ ಜಯಿಸುವ ಗುರಿ ಹೊಂದಿದ್ದೇನೆ’ ಎಂದು ಕೀನ್ಯಾದ ದೂರ ಅಂತರದ ಓಟಗಾರ ಜಿಯೊಫ್ರೆ ಕಮವೊರೊರ್‌ ತಿಳಿಸಿದ್ದಾರೆ.

ಶುಕ್ರವಾರ ಮಾತನಾಡಿದ ಅವರು ‘ಬೆಂಗಳೂರಿನ ಪರಿಸರಕ್ಕೆ ಹೊಂದಿಕೊಳ್ಳುವ ಉದ್ದೇಶದಿಂದ ಸಾಕಷ್ಟು ಮುಂಚಿತವಾಗಿಯೇ ಇಲ್ಲಿಗೆ ಬಂದಿದ್ದೇನೆ. ಕೋಚ್‌ ಪ್ಯಾಟ್ರಿಕ್‌ ಸಂಗ್‌ ಅವರು ಹಲವು ತಂತ್ರಗಳನ್ನು ಹೇಳಿಕೊಟ್ಟಿದ್ದಾರೆ. ಭಾನುವಾರ ಉದ್ಯಾನನಗರಿಯ ಪ್ರಮುಖ ರಸ್ತೆಗಳಲ್ಲಿ ಮಿಂಚು ಹರಿಸಲು ಕಾತರನಾಗಿದ್ದೇನೆ’ ಎಂದರು.

ಕಮವೊರೊರ್‌ ಅವರು 2014ರಲ್ಲಿ ನಡೆದಿದ್ದ ವಿಶ್ವ ಹಾಫ್‌ ಮ್ಯಾರಥಾನ್‌ನಲ್ಲಿ ಮೊದಲ ಪ್ರಶಸ್ತಿ ಜಯಿಸಿದ್ದರು.

ಈ ವರ್ಷದ ಆರಂಭದಲ್ಲಿ ವಲೆನ್ಸಿಯಾದಲ್ಲಿ ನಡೆದಿದ್ದ ಮ್ಯಾರಥಾನ್‌ನಲ್ಲೂ ಚಾಂಪಿಯನ್‌ ಆಗಿದ್ದರು.

‘ದಾಖಲೆ ನಿರ್ಮಿಸುವ ಆಲೋಚನೆ ಇಲ್ಲ. ಚಿನ್ನ ಗೆಲ್ಲುವುದು ನನ್ನ ಗುರಿ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಮಹಿಳಾ ಎಲೀಟ್‌ ವಿಭಾಗದಲ್ಲಿ ಕಣಕ್ಕಿಳಿಯುತ್ತಿರುವ ಇಥಿಯೋಪಿಯಾದ ನೆಟ್‌ಸಾನೆಟ್‌ ಗುಡೆಟಾ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry