ರಾಜ್ಯ ಸರ್ಕಾರವನ್ನು ಟೀಕಿಸಿದ ಇನ್‌ಸ್ಪೆಕ್ಟರ್‌!

7
ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಪೊಲೀಸ್‌ ಅಧಿಕಾರಿ

ರಾಜ್ಯ ಸರ್ಕಾರವನ್ನು ಟೀಕಿಸಿದ ಇನ್‌ಸ್ಪೆಕ್ಟರ್‌!

Published:
Updated:

ಬೆಳಗಾವಿ: ಇಲ್ಲಿನ ಜಿಲ್ಲಾ ಅಪರಾಧ ಪತ್ತೆ ದಳದ ಇನ್‌ಸ್ಪೆಕ್ಟರ್‌ ಉದ್ದಪ್ಪ ಕಟ್ಟಿಕರ್‌ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ‘ನೈತಿಕ ಅಧಃಪತನದ ಪರಮಾವಧಿಗೆ ಸಾಕ್ಷಿ ಇಂದಿನ ಕರ್ನಾಟಕದ ಘಟನಾವಳಿ’ ಎಂದು ಬರೆದಿದ್ದಾರೆ.

‘ಯೋಗ್ಯರಿಂದ ಪ್ರಗತಿ, ಅಯೋಗ್ಯ ರಿಂದ ಅವನತಿ, ಆಯ್ಕೆ ನಮ್ಮ ಕೈಯಲ್ಲಿ’, ‘ಮೂರೂ ಬಿಟ್ಟ ಅನರ್ಹರಿಗೆ ಅಧಿಕಾರ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ, ಅನುಭವಿಸೋದು ಜನರ ಗ್ರಹಚಾರ...’, ‘ದೇಶಕ್ಕಾಗಿ ದುಡಿಯುವವರು ಒಂದು ಕಡೆ, ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳುವವರು ಇನ್ನೊಂದು ಕಡೆ... ಎತ್ತು ಏರಿಗೆ ಎಳೆದರೆ ಕೋಣ ನೀರಿಗೆಳೆದಂತೆ...’, ‘ಜಾತ್ಯತೀತರ ಸೋಗಿನಲ್ಲಿ ಜಾತಿವಾದಿಗಳು ಮತ್ತು ಕೋಮುವಾದಿಗಳು!’, ‘ದೇಶದ್ರೋಹಿಗಳು ಒಂದಾದ ದಿನ ಈ ದಿನ...’ ಎಂದು ಅವರು ಪೋಸ್ಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry