ಕಲುಷಿತ ನೀರು ಪೂರೈಕೆ: ಪ್ರತಿಭಟನೆ

7

ಕಲುಷಿತ ನೀರು ಪೂರೈಕೆ: ಪ್ರತಿಭಟನೆ

Published:
Updated:
ಕಲುಷಿತ ನೀರು ಪೂರೈಕೆ: ಪ್ರತಿಭಟನೆ

ಯಳಂದೂರು: ಪಟ್ಟಣದ 1 ನೇ ವಾರ್ಡ್‌ನ ಕೆ.ಕೆ ರಸ್ತೆಯ ನಲ್ಲಿಗಳಲ್ಲಿ ಮಲ ಮಿಶ್ರಿತ ನೀರು ಪೂರೈಕೆಯಾಗಿದೆ ಎಂದು ಆರೋಪಿಸಿ ಇಲ್ಲಿನ ನಾಗರಿಕರು ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

‘ಇಲ್ಲಿ ಕಳೆದ ಹಲವು ದಿನಗಳಿಂದಲೂ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಅಲ್ಲದೆ, ಈಚೆಗೆ ಕುಡಿಯುವ ನೀರಿನ ಪೂರೈಕೆಯಲ್ಲೂ ವ್ಯತ್ಯಯವಾಗುತ್ತಿದೆ. ಇದರ ಬಗ್ಗೆ ಇಲ್ಲಿನ ವಾಟರ್‌ಮನ್‌ಗೆ ದೂರು ನೀಡಿದರೆ ಆತ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಹಬ್ಬ ಹರಿದಿನಗಳಲ್ಲಿ ಉದ್ದೇಶಪೂರ್ವಕವಾಗಿಯೇ ನೀರು ಪೂರೈಕೆಯಲ್ಲಿ ವ್ಯತ್ಯಯ ಮಾಡಲಾ ಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇಲ್ಲಿನ ವಾಸಿಗಳು ಕುಡಿ ಯುವ ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ಕೆಲವೆಡೆ ಪೈಪ್ ಒಡೆದು ಹೋಗಿದ್ದು, ಚರಂಡಿ ನೀರು ಕೂಡ ನಲ್ಲಿಗಳಲ್ಲಿ ಬರುತ್ತಿದೆ ಎಂಬುದು ಸುರೇಶ್, ರಂಗಮ್ಮ, ಪಾಷಾ, ಸರೋಜ, ರಂಗಸ್ವಾಮಿ, ಮಹೇಶ, ರವಿ, ರಾಜು  ಆರೋಪಿಸಿದರು.

ಈ ಬೀದಿಯಲ್ಲಿ ಕೆಲವು ಮಕ್ಕಳಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು ಕಲುಷಿತ ನೀರು ಪೂರೈಕೆಯೇ ಇದಕ್ಕೆ ಕಾರಣವಾಗಿರುಬಹುದು ಎಂದು ಇಲ್ಲಿನ ನಿವಾಸಿ ಪಲ್ಲವಿ ದೂರಿದರು.

‘ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ದೂರುಗಳು ಈಗ ಬಂದಿವೆ. ಸಂಬಂಧಪಟ್ಟ ವಾಟರ್‌ಮನ್‌ನಿಂದ ಮಾಹಿತಿ ಪಡೆದು ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು’ ಎಂದು ಪ.ಪಂ ಆರೋಗ್ಯಾಧಿಕಾರಿ ಮಹೇಶ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry