4
ಸ್ವಯಂ ಪ್ರಚಾರಕ್ಕೆ A+

ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

Published:
Updated:
ಮೋದಿ ಕಾರ್ಯನಿರ್ವಹಣೆಗೆ ‘ಎಫ್‌’ ಶ್ರೇಣಿ ನೀಡಿದ ರಾಹುಲ್ ಗಾಂಧಿ

ನವದೆಹಲಿ: ಎನ್‌ಡಿಎ ಸರ್ಕಾರ ನಾಲ್ಕು ವರ್ಷ ಆಡಳಿತ ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರ ಶ್ರೇಣೀಕೃತ ಅಂಕಪಟ್ಟಿ (ರಿಪೋರ್ಟ್ ಕಾರ್ಡ್‌) ಬಿಡುಗಡೆ ಮಾಡಿದ್ದಾರೆ.

ಟ್ವಿಟರ್‌ನಲ್ಲಿ ಅಂಕಪಟ್ಟಿ ಬಿಡುಗಡೆ ಮಾಡಿರುವ ಅವರು, ಕಾರ್ಯನಿರ್ವಹಣೆ ವಿಷಯದಲ್ಲಿ ಮೋದಿಗೆ ‘F’ ಶ್ರೇಣಿ ನೀಡಿದ್ದಾರೆ. ಸ್ವಯಂ ಪ್ರಚಾರ ಮತ್ತು ಘೋಷಣೆಗಳ ವಿಚಾರದಲ್ಲಿ ‘A+’ ಶ್ರೇಣಿ ನೀಡಿದ್ದಾರೆ. ಜತೆಗೆ, ಷರಾವೊಂದನ್ನೂ ಬರೆದಿದ್ದಾರೆ.

ಮೋದಿ ಅವರಿಗೆ ರಾಹುಲ್ ನೀಡಿರುವ ಶ್ರೇಣಿಗಳು ಹೀಗಿವೆ:

‘4 ವರ್ಷಗಳ ಅಂಕಪಟ್ಟಿ

ಕೃಷಿ – F

ವಿದೇಶಾಂಗ ನೀತಿ – F

ಇಂಧನ ದರ – F

ಉದ್ಯೋಗ ಸೃಷ್ಟಿ – F

ಘೋಷಣೆಗಳು – A+

ಸ್ವಯಂ ಪ್ರಚಾರ – A+

ಯೋಗ – B-

ಷರಾ: ನುರಿತ ಸಂವಹನಕಾರ, ಸಂಕೀರ್ಣ ಸಮಸ್ಯೆಗಳ ನಿರ್ವಹಣೆಯಲ್ಲಿ ಒದ್ದಾಟ’ ಹೀಗೆಂದು ರಾಹುಲ್ ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry