ಚನ್ನಗಿರಿ: ಹಿರೇಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ

7

ಚನ್ನಗಿರಿ: ಹಿರೇಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ

Published:
Updated:
ಚನ್ನಗಿರಿ: ಹಿರೇಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋದ ವ್ಯಕ್ತಿ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕೆ.ಲಕ್ಷ್ಮಿಸಾಗರ ಗ್ರಾಮದ ವ್ಯಕ್ತಿ ಬಸಪ್ಪ(65) ಎಂಬುವರು ಶುಕ್ರವಾರ ತುಂಬಿ ಹರಿಯುತ್ತಿದ್ದ ಹಿರೇಹಳ್ಳದಲ್ಲಿ ಕೊಚ್ಚಿಹೋಗಿದ್ದಾರೆ. ಅವರು ಸಂಜೆ ಜಮೀನಿನಿಂದ ಮನೆಗೆ ಹಿಂದಿರುಗುವಾಗ ಸೇತುವೆ ದಾಟುವ ವೇಳೆ ಈ ಘಟನೆ ನಡೆದಿದೆ.

ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿ ಹೋಗುತ್ತಿದ್ದುದನ್ನು ಕಂಡು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ನೀರಿಗೆ ಧುಮುಕಿದ್ದಾರೆ. ಆದರೆ, ಕೊಚ್ಚಿಹೋದ ವ್ಯಕ್ತಿಯನ್ನು ಬದುಕಿಸಲು ಸಾಧ್ಯವಾಗಿಲ್ಲ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಗ್ರಾಮದ ಸುತ್ತ ಗುರುವಾರ ರಾತ್ರಿ ಬಿದ್ದ ಭಾರಿ ಮಳೆಗೆ ಅಲ್ಲಿನ ಕೆರೆ ಕೋಡಿ ಬಿದ್ದಿದ್ದು, ಹೆಚ್ಚಾದ ನೀರು ತಾಲ್ಲೂಕಿನ ಕಾಕನೂರು ಗ್ರಾಮದ ಬಳಿಯ ಹಿರೇಹಳ್ಳದಲ್ಲಿ ಏಕಾಏಕಿ ಹರಿದು ಬಂದ ಪರಿಣಾಮ, ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿ ಹೋದ ಘಟನೆ ಸಂಜೆ ನಡೆದಿದೆ.

ಶವ ಶೋಧಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದಿದ್ದಾರೆ. ಸೇತುವೆ ಕಾಮಗಾರಿ ಕಳಪೆ ಆಗಿದ್ದೆ ರೈತನ ಸಾವಿಗೆ ಕಾರಣ ಎಂಬುದು ಸ್ಥಳೀಯರ ಆರೋಪ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry